ಮುಖ್ಯಮಂತ್ರಿಯ ಅವಹೇಳನ: ಜಿಲ್ಲಾ ಕಾನೂನು ಅಧಿಕಾರಿಯ ಅಮಾನತು
ಕಾಸರಗೋಡು: ಕಾಸರಗೋಡು ಜಿಲ್ಲಾ ಕಾನೂನು ಅಧಿಕಾರಿ ಆಕಾಶ್ ರವಿ ಅವರನ್ನು ಸೇವೆಯಿಂದ ತನಿಖಾ ವಿಧೇಯವಾಗಿ ಅಮಾನತು ಗೊಳಿಸಲಾಗಿದೆ.
ಕಾನೂನು ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ಹಾಗೂ ಕೇರಳ ಸೆಕ್ರೆಟರಿ ಯೇಟ್ ಎಂಪ್ಲಾಯೀಸ್ ಸಂಘ್‌ನ ಅಧ್ಯಕ್ಷರಾದ ಆಕಾಶ್ ರವಿ ಮುಖ್ಯಮಂತ್ರಿ ವಿರುದ್ಧ ಅವಮಾನಕರ ರೀತಿಯಲ್ಲಿ ಸಂಘಟನೆ ಹೆಸರಲ್ಲಿ ನೋಟೀಸು ಹೊರಡಿಸಿದ ಸಂಬಂಧ ಕಠಿಣ ಶಿಕ್ಷೆಗಿರುವ ಶಿಸ್ತು ಕ್ರಮ ಎದುರಿಸುವ ಉದ್ಯೋಗಿಯಾಗಿದ್ದಾರೆಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದ. ಇದರ ಹೊರತು ಪಾಲಕ್ಕಾಡ್ ಜಿಲ್ಲಾ ಕಾನೂನು ಅಧಿಕಾರಿಯಾ ಗಿರುವಾಗ ಪಾಲಕ್ಕಾಡ್ ತಹಶೀಲ್ದಾರ್, ಡೆಪ್ಯುಟಿ ತಹಶೀಲ್ದಾರ್ ಎಲ್.ಆರ್ ಎಂಬಿವರೊಂದಿಗೆ ಸೇರಿ ಕಾನೂನು ವಿರುದ್ಧ ಚಟುವಟಿಕೆ ನಡೆಸಿರುವುದಾಗಿಯೂ, ಲಂಚ ಪಡೆದಿರುವುದಾಗಿ ಕೇಳಿಬಂದ ದೂರುಗಳಲ್ಲಿ ಜಿಲ್ಲಾಧಿ ಕಾರಿ ವಿಜಿಲೆನ್ಸ್ ತನಿಖೆಗೆ ಶಿಫಾರಸು ಮಾಡಿದ್ದು, ಅದರ ಅಂಗವಾಗಿ ಕಾಸರಗೋಡಿಗೆ ವರ್ಗಾವಣೆ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿಯನ್ನು ಅವಹೇಳ ನಗೈದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಡಳಿತ ಇಲಾಖೆ ಅಡಿಶನಲ್ ಸೆಕ್ರೆಟರಿಯನ್ನು ತನಿಖಾಧಿಕಾರಿಯಾಗಿ ಸರಕಾರ ನೇಮಿಸಿತ್ತು. ಹೇಳಿಕೆ ಸಂಗ್ರಹ ವೇಳೆ 50,000 ರೂಪಾಯಿ ನೀಡಿದ್ದು, ದೇಶಾಭಿಮಾನಿಯ ಚಂದಾದಾ ರನಾದರೆ ಶಿಸ್ತು ಕ್ರಮದಿಂದಹೊರತು ಪಡಿಸುವುದಾಗಿ ತನಿಖಾಧಿಕಾರಿ ಭರವಸೆ ನೀಡಿರುವುದಾಗಿ ಆಕಾಶ್‌ರವಿ ಆರೋಪ ಹೊರಿಸಿದ್ದು, ಪ್ರಾಮಾಣಿ ಕನೂ, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುವ ತನಿಖಾಧಿಕಾರಿಗೆ ಈ ಮೂಲಕ ಕಳಂಕವುಂಟುಮಾಡಲು ಯತ್ನಿಸಿರುವುದಾಗಿ ಆದೇಶದಲ್ಲಿ ತಿಳಿಸ ಲಾಗಿದೆ. ಅಮಾನತು ಕಾಲದಲ್ಲಿ ಇವರಿಗೆ ಉಪಜೀವನ ಭತ್ತೆಗೆ ಅರ್ಹ ತೆಯಿರುವುದಾಗಿ ತಿಳಿಸಲಾಗಿದೆ.