ಮುಳಿಯಾರಿನಲ್ಲಿ ಚಿರತೆ ಭೀತಿ: ಕ್ರಮ ಬೇಕೆಂದು ಆಗ್ರಹಿಸಿ ರೈತರ ಸಂಘದಿಂದ ನೈಟ್ ಮಾರ್ಚ್

ಬೋವಿಕ್ಕಾನ:  ಚಿರತೆ ಭೀತಿಯನ್ನು ದೂರಗೊಳಿಸಬೇಕೆಂದು ಆಗ್ರಹಿಸಿ ಕೃಷಿಕರ ಸಂಘ ಕಾರಡ್ಕ ಅರಣ್ಯ ಸೆಕ್ಷನ್ ಕಚೇರಿಗೆ ನಡೆಸಿದ ನೈಟ್ ಮಾರ್ಚ್‌ನಲ್ಲಿ ಪ್ರತಿಭಟನೆ ಉಕ್ಕೇರಿದೆ. ಕಾಡುಪ್ರಾಣಿಗಳ ಉಪಟಳವನ್ನು ಶಾಶ್ವತವಾಗಿ ಪರಿಹರಿಸಬೇಕು. ಚಿರತೆಭೀತಿಯಿಂದ ಜನರ ಜೀವಕ್ಕೆ ಸಂರಕ್ಷಣೆ ಖಚಿತಪಡಿ ಸಬೇಕು, ಕೃಷಿ ಬೆಳೆಗಳಿಗೆ ಸಂರಕ್ಷಣೆ ಖಚಿತಪಡಿಸಬೇಕು, ರಾತ್ರಿ ಕಾಲದ ಪಟ್ರೋಲಿಂಗ್ ತೀವ್ರಗೊಳಿಸಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟು ರೈತರ ಸಂಘ ಇರಿಯಣ್ಣಿ ವಿಲ್ಲೇಜ್ ಸಮಿತಿ ಅರಣ್ಯ ಇಲಾಖೆಯ ಕಚೇರಿಗೆ ಮಾರ್ಚ್ ನಡೆಸಿದೆ. ಇರಿಯಣ್ಣಿಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದರು. ಮಾರ್ಚನ್ನು ಸಂಘದ ಜಿಲ್ಲಾಧ್ಯಕ್ಷ ಕೆ. ಕುಂಞಿರಾಮನ್ ಉದ್ಘಾಟಿಸಿದರು. ಕೆ.ವಿ. ಸಜೇಶ್ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಏರಿಯ ಕಾರ್ಯದರ್ಶಿ ಎಂ. ಮಾಧವನ್, ಇ. ಮೋಹನನ್, ಎ. ವಿಜಯಕುಮಾರ್, ಪಿ.ವಿ. ಮಿನಿ, ಪಿ. ಬಾಲಕೃಷ್ಣನ್, ಬಿ.ಕೆ. ನಾರಾಯಣನ್, ಕೆ. ಪ್ರಭಾಕರನ್ ಮಾತನಾಡಿದರು. ವಿ. ವಾಸು ಸ್ವಾಗತಿಸಿ ದರು. ಬಳಿಕ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಜನರ ಜೀವ ರಕ್ಷಣೆಗೆ ಬೇಕಾಗಿ ಅರಣ್ಯ ಇಲಾಖೆ ಇನ್ನೊಂದು ವಾಹನದಲ್ಲಿ ಪಟ್ರೋಲಿಂಗ್ ನಡೆಸುವುದಾಗಿಯೂ, ಚಿರತೆ ಭೀತಿ ಯನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳು ವುದಾಗಿಯೂ ಭರವಸೆ ನೀಡಿದರು

You cannot copy contents of this page