ಮುಳ್ಳೇರಿಯ- ನೀರೋಳಿ ಪಾರೆ ರಸ್ತೆ ಕಾಮಗಾರಿ: ೨೨ರಿಂದ ತಾತ್ಕಾಲಿಕ ಮುಚ್ಚುಗಡೆ
ಮುಳ್ಳೇರಿಯ: ಪಿ.ಎಂ.ಜಿ.ಎಸ್.ವೈ ಯೋಜನೆಯಲ್ಲಿ ಸೇರಿಸಿ ರಸ್ತೆ ಕಾಮಗಾರಿ ನಡೆಸಲಿರುವುದರಿಂದಾಗಿ ಮುಳ್ಳೇರಿಯ- ನೀರೋಳಿಪಾರ ರಸ್ತೆಯನ್ನು ಈ ತಿಂಗಳ ೨೨ರಿಂದ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಪೈಕ- ಮುಳ್ಳೇರಿಯ ರಸ್ತೆಯ ಮುಂಡೋಳು ಜಂಕ್ಷನ್ನಿಂದ ಮುಳ್ಳೇರಿಯವರೆಗೆ ರಸ್ತೆ ಕಾಮಗಾರಿ ನಡೆಯಲಿದೆ. ವಾಹನಗಳು ಮುಂಡೋಳು ಜಂಕ್ಷನ್ ಕರ್ಮಂತೋಡಿ ರಸ್ತೆಯಲ್ಲಿ ಮುಳ್ಳೇರಿಯ ಭಾಗಕ್ಕೂ, ತಿರುಗಿಯೂ ಸಂಚರಿಸಬೇಕೆಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.