ಮುಳ್ಳೇರಿಯ 110 ಕೆವಿ ಸಬ್‌ಸ್ಟೇಷನ್‌ನಲ್ಲಿ ಬೆಂಕಿ ಆಕಸ್ಮಿಕ: ಪೊಟೆನ್ಶಿಯಲ್ ಟ್ರಾನ್ಸ್‌ಫಾರ್ಮರ್ ಭಸ್ಮ

ಮುಳ್ಳೇರಿಯ: ಇಲ್ಲಿನ 110 ಕೆವಿ ಸಬ್ ಸ್ಟೇಷನ್‌ನಲ್ಲಿ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದೆ. ನೌಕರರು ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ. ಇಂದು ಮುಂಜಾನೆ ಮೂರೂವರೆ ಗಂಟೆಗೆ ಘಟನೆ ನಡೆದಿದೆ. ಸಬ್ ಸ್ಟೇಷನ್ ಯಾರ್ಡ್‌ನ ಪೊಟೆನ್ಶಿಯಲ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಉಂಟಾಗಿತ್ತು. ಕರ್ತವ್ಯದಲ್ಲಿದ್ದ ನೌಕರರು ಯಾರ್ಡ್‌ನಲ್ಲಿ ಇದ್ದ ಎಸ್ಟಿಂಗ್ಯೂಶರ್ ಉಪಯೋಗಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲ ಉಂ ಟಾಗದ ಹಿನ್ನೆಲೆಯಲ್ಲಿ ಕಾಸರಗೋಡು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅಲ್ಲಿನ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲನ್‌ರ ನೇತೃತ್ವದಲ್ಲಿ ತಲುಪಿದ ತಂಡ ಬೆಂಕಿ ನಂದಿಸಿದೆ.

ಬೆಂಕಿ ಆಕಸ್ಮಿಕದ ಹಿನ್ನೆಲೆಯಲ್ಲಿ ಚೆರ್ಕಳ, ಮುಳ್ಳೇರಿಯ, ಬದಿಯಡ್ಕ, ಎರಿಂಞಿಪುಳ, ಕುತ್ತಿಕ್ಕೋಲ್ ಪ್ರದೇಶದ ವಿದ್ಯುತ್ ಸಂಪರ್ಕವನ್ನು ವಿಚ್ಚೇಧಿಸ ಲಾಗಿತ್ತು. ಆದರೆ ಬಳಿಕ ಬೆಂಕಿ ಸೃಷ್ಟಿಯಾದ ಯಾರ್ಡ್ ಹೊರತುಪಡಿಸಿ ಉಳಿದ ಕಡೆ ಸಂಪರ್ಕ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ತಂಡದಲ್ಲಿ ಎಂ. ರಮೇಶ, ಎಸ್. ಅರುಣ್ ಕುಮಾರ್, ಪಿ.ಸಿ. ಮೊಹಮ್ಮದ್ ಸಿರಾಜುದ್ದೀನ್, ಕೆ. ಸತೀಶ್, ಹೋಂಗಾರ್ಡ್, ಟಿ.ವಿ. ಪ್ರವೀಣ್ ಕುಮಾರ್ ಮೊದಲಾದವರಿದ್ದರು.

You cannot copy contents of this page