ಮುಳ್ಳೇರಿಯ: 44 ಲಕ್ಷ ರೂ. ವೆಚ್ಚದಲ್ಲಿ ನವೀಕರಣೆಗೊಂಡ ಕಾರಡ್ಕ ಪಂ. ಸ್ಮಶಾನ
ಮುಳ್ಳೇರಿಯ: ಕಳೆದ ಹಲವು ವರ್ಷಗಳಿಂದ ಉಪಯೋಗಶೂ ನ್ಯವಾಗಿದ್ದ ಕಾರಡ್ಕ ಪಂಚಾಯತ್‌ನ ರುದ್ರಭೂಮಿಯನ್ನು ನವೀಕರಿಸಲಾ ಗುತ್ತಿದೆ. ಒಟ್ಟು ೪೪ ಲಕ್ಷ ರೂ. ವೆಚ್ಚದಲ್ಲಿ ಆ ಸ್ಮಶಾನವನ್ನು ಈಗ ನವೀಕರಿಸಲಾಗುತ್ತಿದ್ದು, ಹೆಚ್ಚಿನ ಕಾಮಗಾರಿಗಳನ್ನು ನಡೆಸಲಾಗಿದೆ. ಇನ್ನು ಅಂಗಳಕ್ಕೆ ಇಂಟರ್‌ಲಾಕ್ ಹಾಕುವ ಕೆಲಸವಷ್ಟೇ ಬಾಕಿಯಿದೆ.
ಕಾರಡ್ಕ ಪಂಚಾಯತ್‌ನ ಫಂ ಡ್‌ನಿಂದ ೧೪ ಲಕ್ಷ ರೂ., ಜಿಲ್ಲಾ ಪಂಚಾಯತ್ ಫಂಡ್‌ನಿಂದ ೨೦ ಲಕ್ಷ ರೂ., ಬ್ಲೋಕ್ ಪಂಚಾಯತ್‌ನಿಂದ ೧೦ ಲಕ್ಷ ರೂ. ಮೀಸಲಿಟ್ಟು ಸನ್ಮಾನ ವನ್ನು ನವೀಕರಿಸಲಾಗಿದೆ. ಮೃತದೇ ಹವನ್ನು ದಹಿಸಲು ಸಿದ್ಧಪಡಿಸಿದ ಶೆಡ್‌ನ ಛಾವಣಿ ಹಾನಿಯಾಗಿರುವ ಕಾರಣ ಮಳೆಗಾಲ ಸಹಿತ ಇಲ್ಲಿ ಮೃತದೇಹದ ಸಂಸ್ಕಾರ ನಡೆಸಲು ಕಷ್ಟವಾಗುತ್ತಿತ್ತು. ಹಲವು ವರ್ಷಗಳಿಂದ ಇದೇ ಸ್ಥಿತಿ ಮುಂದುವರಿದಾಗ ಸ್ಥಳೀಯರು ಬೇಡಿಕೆ ಮುಂದಿಟ್ಟಿದ್ದು, ಈಗ ದುರಸ್ತಿ ನಡೆಸಲಾಗುತ್ತಿದೆ ಈ ಮೊದಲು ಇಲ್ಲ ನೀರಿನ ಸೌಕರ್ಯವಿರಲಿಲ್ಲ. ಈಗ ಅದಕ್ಕೂ ವ್ಯವಸ್ಥೆ ಮಾಡಲಾಗಿದ್ದು, ಸುತ್ತು ಆವರಣಗೋಡೆ, ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ನೂತನ ಶೆಡ್ ಕೂಡಾ ನಿರ್ಮಿಸಲಾಗಿದ್ದು, ಸಾಮಗ್ರಿಗಳನ್ನು ಸಂಗ್ರಹಿಸಿಡಲು ಕೊಠಡಿ ನಿರ್ಮಿಸಲಾಗಿದೆ
ಬೆಳ್ಳೂರು, ಕಾರಡ್ಕ, ಕುಂಬ್ಡಾಜೆ ಪಂಚಾಯತ್‌ಗಳ ವ್ಯಾಪ್ತಿಯಲ್ಲಿನವರು ಮೃತದೇಹದ ಸಂಸ್ಕಾರಕ್ಕೆ ಈ ಸ್ಮಶಾನ ಉಪಯೋಗಿಸುತ್ತಿದ್ದಾರೆ.