ಮುಸ್ಲಿಂ ಲೀಗ್ ಮುಖಂಡ ನಿಧನ
ಪೈವಳಿಕೆ: ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ಉಪಾಧ್ಯಕ್ಷ ಚಿಪ್ಪಾರು ಶಿರಂತಡ್ಕ ಬದಿಮೂಲೆ ನಿವಾಸಿ ಉದ್ಯಮಿ ಅಂದುಞ್ಞಿ ಹಾಜಿ (64) ನಿಧನಹೊಂದಿದರು. ನಿನ್ನೆ ರಾತ್ರಿ 1 ಗಂಟೆಗೆ ಹೃದಯಾಘಾತವುಂಟಾಗಿದೆ. ಮುಸ್ಲಿಂ ಲೀಗ್ ಜಿಲ್ಲಾ ಕೌನ್ಸಿಲ್ ಸದಸ್ಯ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಶಿರಂತಡ್ಕ ಜುಮಾ ಮಸೀದಿ ಅಧ್ಯಕ್ಷರಾಗಿದ್ದ ಇವರು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಜೈನಬಾ, ಮಕ್ಕಳಾದ ಇಬ್ರಾಹಿಂ ಬಾತಿಷ, ಮೊಹಮ್ಮದ್ ಬಾಸಿಲ್, ಆಯಿಷತ್ ಬಾಸಿಲ, ಫಾತಿಮ, ಡಾ| ಖದೀಜತ್ ಫಾಯಿಮ, ಅಳಿಯಂದಿರಾದ ನಾಸಿರ್ ನಾಟೆಕಲ್ಲು, ಅನೀಸ್ ಆದೂರು, ಸೊಸೆ ಶಿಯಾ ಸುನೀಸ (ಪೈವಳಿಕೆ ಪಂ. ಸದಸ್ಯೆ), ಸಹೋದರಿಯರಾದ ಫಾತಿಮ, ಮಿಸ್ರಿಯ, ರುಖಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರ ಮೊಹಮ್ಮದ್ ಅಶ್ರಫ್ ಈ ಹಿಂದೆ ನಿಧನರಾಗಿದ್ದಾರೆ.