ಮೂವರು ಮಕ್ಕಳ ತಾಯಿ ನಾಪತ್ತೆ
ಬದಿಯಡ್ಕ: ಮೂರು ಮಕ್ಕಳ ತಾಯಿಯೋರ್ವೆ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಬದಿಯಡ್ಕ ಪರಿಸರ ನಿವಾಸಿ ಹಾಗೂ ನೀರ್ಚಾ ಲ್‌ನಲ್ಲಿ ಫ್ಯಾನ್ಸಿ ಅಂಗಡಿಯಲ್ಲಿ ದುಡಿಯುತ್ತಿರುವ 37ರ ಹರೆಯದ ಯುವತಿ ಜು.18ರಂದು ರಾತ್ರಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರ ಮನೆಯವರು ತಿಳಿಸಿದ್ದಾರೆ. ನಾಪತ್ತೆಯಾದ ಬಳಿಕ ತಾನು ನಾಳೆ ಬರುತ್ತೇನೆಂದು ಆಕೆ ಫೋನ್ ಕರೆದು ಮನೆಯವರಿಗೆ ಮೊದಲು ತಿಳಿಸಿ ದ್ದಳು. ಅನಂತರ ಫೋನ್ ಮಾಡಿ ತಾನು ಇನ್ನು ಮನೆಗೆ ಬರುವುದಿಲ್ಲ ವೆಂದು ಹೇಳಿದ್ದಳೆಂದೂ ಪೊಲೀ ಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾ ಗಿದೆ. ಆ ಯುವತಿ ಈಗ ತೃಶೂರು ನಿವಾಸಿಯೋರ್ವನನ್ನು ಮದುವೆ ಯಾಗಿ ಆತನ ಜೊತೆಗಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದೂ, ಅದರ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿ ದೆ ಎಂದು ಪೊಲೀಸರು ತಿಳಿಸಿದ್ದಾರೆ.