ಮೂಸೋಡಿ-ಮಣಿಮುಂಡ ರಸ್ತೆ ಶೋಚನೀಯ: ಸಂಚಾರಕ್ಕೆ ಅಡಚಣೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮೂಸೋಡಿ ಶಾಲಾ ಬಳಿಯಿಂದ ಮಣಿಮುಂಡ ಲೋಕೋ¥ Àಯೋಗಿ ಇಲಾಖೆಗೆ ಸೇರಿದ ಸಮುದ್ರ ತೀರ ರಸ್ತೆ ಹದಗೆಟ್ಟು ನೀರು ತುಂಬಿಕೊAಡು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಸುಮಾರು ಒಂದೂ ವರೆ ಕಿಲೋ ಮೀಟರ್ ಉದ್ದಕ್ಕೆ ಅಲ್ಲಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು, ಮಳೆಗೆ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹಗೊAಡು ಹೊಳೆಯ ರೀತಿಯಲ್ಲಿ ಕಂಡುಬರುತ್ತಿದೆ. ಪರಿಸರದಲ್ಲಿ ತ್ಯಾಜ್ಯ ಸಂಗ್ರಹಗೊAಡು ಆತಂಕ ಉಂಟಾಗಿದೆ. ಮೀನು ಕಾರ್ಮಿಕರ ಸಹಿತ ನೂರಾರು ಮನೆಗಳು ಹೊಂದಿರುವ ಈ ಪ್ರದೇಶದಲ್ಲಿ ರಸ್ತೆ ಶೋಚನೀಯವಸ್ಥೆಯಿಂದ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಅಟೋರಿಕ್ಷಾ ಬಾಡಿಗೆಗೆ ತೆರಳಲು ಹಿಂಜರಿಯುವ ಅವಸ್ಥೆ ಉಂಟಾಗಿದೆ. ನಡೆದು ಹೋಗುವ ವೇಳೆ ಕೆಸರು ನೀರಿನ ಸಿಂಚನ ಉಂಟಾಗುತ್ತಿದೆ. ಈ ರಸ್ತೆ ದುರಸ್ತಿಗೆ ವಿವಿಧ ಅಧಿಕಾರಿಗಳಿಗೆ ಸ್ಥಳೀಯರು ಹಲವು ಬಾರಿ ಮನವಿಯನ್ನು ನೀಡಿದರೂ ಯಾವುದೇ ಕ್ರಮವಿಲ್ಲವೆಂದು ಊರವರು ತಿಳಿಸಿದ್ದಾರೆ. ಸಮುದ್ರ ಬದಿಯಲ್ಲಿ ಗೋಡೆ ನಿರ್ಮಿಸಲು ಕಗ್ಗಲ್ಲು ಸಾಗಿಸುವ ಲಾರಿಗಳ ಸಂಚಾರ, ನೀರಿನ ಪೈಪ್ ಅಳವಡಿಸಲು ರಸ್ತೆಯನ್ನು ಅಗೆದು ಬಳಿಕ ದುರಸ್ತಿಗೊಳಿಸದ ಹಿನ್ನೆಲೆಯಲ್ಲಿ ರಸ್ತೆ ಶೋಚನೀಯ ಸ್ಥಿತಿಗೆ ತಲುಪಲು ಕಾರಣವೆನ್ನಲಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಈ ರಸ್ತೆಗೆ ವ್ಯವಸ್ಥಿತ ಚರಂಡಿ ಹಾಗೂ ಡಾಮರೀಕರಣಕ್ಕೆ ಊರವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page