ಮೆತಾಪಿಟಮಿನ್, ಗಾಂಜಾ ಸಹಿತ ಓರ್ವ ಸೆರೆ
ಉಪ್ಪಳ: ಇಲ್ಲಿಗೆ ಸಮೀಪದ ಬೇರಿಕೆಯಲ್ಲಿ ಅಬಕಾರಿ ತಂಡ ನಡೆಸಿದ ದಾಳಿಯಲ್ಲಿ ಮಾದಕ ವಸ್ತುಗಳಾದ ಗಾಂಜಾ ಹಾಗೂ ಮೆತಾಪಿಟಮಿನ್ ಸಹಿತ ಓರ್ವನನ್ನು ಸೆರೆಹಿಡಿಯಲಾಗಿದೆ. ಉಪ್ಪಳ ಹಿದಾಯತ್ ನಗರದಲ್ಲಿ ವಾಸಿಸುವ ಅಬ್ದುಲ್ ಲತೀಫ್ (42) ಎಂಬಾತ ಸೆರೆಗೀಡಾದ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಗುಪ್ತ ಮಾಹಿತಿ ಆಧಾರದಲ್ಲಿ ಕುಂಬಳೆ ರೇಂಜ್ ಅಬಕಾರಿ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದಲ್ಲಿ ನಡೆಸಿದ ದಾಳಿ ವೇಳೆ ಗಾಂಜಾ ಸಹಿತ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಈತನ ಕೈಯಿಂದ 1.496 ಗ್ರಾಂ ಮೆತಾಪಿಟಮಿನ್ ಹಾಗೂ 21 ಗ್ರಾಂ ಗಾಂಜಾವನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಪ್ರಿವೆಂಟೀವ್ ಆಫೀಸರ್‌ಗಳಾದ ಕೆ.ವಿ. ಮನಾಸ್, ಪ್ರಿವೆಂಟೀವ್ ಆಫೀಸರ್ ಗ್ರೇಡ್ ರಮೇಶನ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಎಂ.ಎಂ. ಅಖಿಲೇಶ್, ಜಿತಿನ್, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್ ಸಜಿನ, ಸಿವಿಲ್, ಚಾಲಕ ಪ್ರವೀಣ್ ಕುಮಾರ್ ಮೊದಲಾದವರು ಕಾರ್ಯಾಚರಣೆ ತಂಡದಲ್ಲಿದ್ದರು.