ಮೇಲ್ಸೇತುವೆಯಲ್ಲಿ ಅಪಘಾತ ನಾಲ್ಕು ಕಾರುಗಳು ನುಚ್ಚುನೂರು
ಕಾಸರಗೋಡು: ನೀಲೇಶ್ವರ ರಾಷ್ಟ್ರೀಯ ಹೆದ್ದಾರಿಯ ಪಳ್ಳಿಕ್ಕೆರೆ ಮೇಲ್ಸೇತುವೆಯಲ್ಲಿ ನಿನ್ನೆ ಉಂಟಾದ ವಾಹನ ಅಪಘಾತದಲ್ಲಿ ನಾಲ್ಕು ಕಾರುಗಳು ನುಚ್ಚು ನೂರಾಗಿವೆ.
ಈ ಮೇಲ್ಸೇತುವೆಯಲ್ಲಿ ಕಾರ್ಯಂಗೋಡಿನತ್ತ ಇಳಿಯುವ ಭಾಗದಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಮೊದಲು ಡಿವೈಡ ರ್ಗೆ ಢಿಕ್ಕಿ ಹೊಡೆದಿದೆ. ಆ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಇನ್ನೊಂದು ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳಿಗೆ ಢಿಕ್ಕಿಹೊಡೆದು ಅದೂ ನುಚ್ಚು ನೂರಾಗಿದೆ. ಹೀಗೆ ಹಾನಿಗೀಡಾದ ಕಾರಿನ ಪೈಕಿ ಒಂದರ ಮಾಲಕ ಕರ್ನಾಟಕ ಭಟ್ಕಳ ನಿವಾಸಿ ಮೊಹ ಮ್ಮದ್ ಖಲೀಲ್ ಎಂಬವರಾಗಿ ದ್ದಾರೆ. ಅವರು ನೀಡಿದ ದೂರಿ ನಂತೆ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿ ಸಿದ್ದಾರೆ.