ಮೊಗ್ರಾಲ್ ಜಿವಿಎಚ್‌ಎಸ್‌ಎಸ್ ನ ಹೆಂಚಿನ ಕಟ್ಟಡದ ಫಿಟ್ನೆಸ್ ಸರ್ಟಿಫಿಕೇಟ್ ರದ್ದು
ಕಾಸರಗೋಡು: ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ 7 ತರಗತಿ ಕೊಠಡಿಗಳು ಕಾರ್ಯಾಚರಿಸುವ ಹೆಂಚಿನ ಕಟ್ಟಡ ಫಿಟ್ನೆಸ್ ಸರ್ಟಿಫಿ ಕೇಟ್ ಕುಂಬಳೆ ಪಂಚಾಯತ್ ಇಂಜಿನಿಯರ್ ರದ್ದುಗೊ ಳಿಸಿದ್ದಾರೆ. ಶಾಲಾಧಿಕಾರಿಗಳು ಈ ಕಟ್ಟಡದಿಂದ ವಿದ್ಯಾರ್ಥಿಗಳನ್ನು ತೆರವುಗೊಳಿಸಿದ್ದಾರೆ. ಶಾಲಾ ಕಟ್ಟಡದ ಮೇಲ್ಛಾವಣಿ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದೆಯೆಂದು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೊಗ್ರಾಲ್ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 25೦೦ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಇಲ್ಲಿ ಅಗತ್ಯದ ಕಟ್ಟಡ ಸೌಕರ್ಯಗಳು ಇಲ್ಲ. ಶಾಲಾ ಕಟ್ಟಡಕ್ಕಾಗಿ ಪಿಟಿಎ, ಎಸ್‌ಎಂಸಿ ಕಮಿಟಿಗಳು ನಿರಂತರ ವಾಗಿ ಅಧಿಕಾರಿಗಳನ್ನು ಭೇಟಿಯಾಗಿ ಬೇಡಿಕೆ ಮುಂದಿರಿಸಿವೆ. ಶಾಲೆಯಲ್ಲಿ ನಡೆದ ಅಭಿವೃದ್ಧಿ ನಿಧಿ ಅವ್ಯವಹಾರದಿಂದಾಗಿ ಫಂಡ್ ಮಂಜೂರುಗೊಳ್ಳಲು ಈಗ ಪಿಟಿಎ ಭಾರೀ ಕಷ್ಟಪಡುತ್ತಿದೆ. ಕಟ್ಟಡದ ದುರಸ್ತಿಗೆ 5.5 ಲಕ್ಷ ರೂಪಾಯಿಗಳ ಎಸ್ಟಿಮೇಟ್ ತಯಾರಿಸಿ ನೀಡಲಾಗಿದೆ. ಇದನ್ನು ಪಡೆಯಲಿರುವ ಪ್ರಯತ್ನದಲ್ಲಿ ಪಿಟಿಎ ನಿರತವಾಗಿದೆ. ಶಾಲೆಯ ಮೇಲ್ನೋಟ ವಹಿಸುವ ಜಿಲ್ಲಾ ಪಂಚಾಯತನ್ನೂ ಸಮೀಪಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಫಂಡ್ ಮಂಜೂರುಗೊಳಿಸಬೇಕೆಂದು ಮೊಗ್ರಾಲ್ ರೆಡ್ ಸ್ಟಾರ್ ಶಿಕ್ಷಣ ಸಚಿವರಿಗೆ, ಜಿಲ್ಲಾಧಿಕಾರಿಗೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ.