ಮೊಗ್ರಾಲ್ ಪುತ್ತೂರು, ಮಚ್ಚಂಪಾಡಿಯಲ್ಲಿ ಬೀಗ ಜಡಿದ ಮನೆಗಳಿಂದ ನಗ-ನಗದು ಕಳವು
ಕಾಸರಗೋಡು/ ಮಂಜೇಶ್ವರ: ಕಾಸರಗೋಡು ಬಳಿಯ ಮೊಗ್ರಾಲ್ ಪುತ್ತೂರು ಹಾಗೂ ಮಂಜೇಶ್ವರ ಬಳಿಯ ಮಚ್ಚಂಪಾಡಿಯಲ್ಲಿ ಎರಡು ಕಳವು ಪ್ರಕರಣಗಳು ನಡೆದಿವೆ. ಎರಡೂ ಮನೆಗಳಿಂದಲೂ ಭಾರೀ ಪ್ರಮಾಣದ ಚಿನ್ನಾಭರಣ ಹಾಗೂ ಹಣ ಕಳವು ನಡೆಸಲಾಗಿದೆ. ಎರಡೂ ಕಡೆಗಳಲ್ಲಿ ಬೀಗ ಜಡಿದ ಮನೆಗಳಿಗೆ ಕಳ್ಳರು ನುಗ್ಗಿ ಕಳವು ನಡೆಸಿದ್ದಾರೆ.
ಮೊಗ್ರಾಲ್ ಪುತ್ತೂರು ಪೇಟೆಯ ಮಸೀದಿ ಬಳಿಯ ಫೈಸಲ್ ಮಂಜಿಲ್‌ನ ಇಬ್ರಾಹಿಂ ಎಂಬವರ ಎರಡು ಮಹಡಿಯ ಮನೆಯಲ್ಲಿ ಕಳವು ನಡೆದಿದೆ. ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ 45 ಪವನ್ ಚಿನ್ನದ ಒಡವೆ ಮತ್ತು ನಗದು ಅಪಹರಿಸಿದ್ದಾರೆ. ಇಬ್ರಾಹಿಂರ ಮಗ ಇಲ್ಯಾಸ್‌ರ ಪತ್ನಿಯ ಒಡವೆಗಳಾಗಿವೆ ಕಳವು ಗೈಯ್ಯಲ್ಪಟ್ಟಿರು ವುದು. ಇದರ ಹೊರತಾಗಿ ನಗದನ್ನು ಕಳ್ಳರು ದೋಚಿದ್ದಾರೆ. ಇಬ್ರಾಹಿಂ ಮತ್ತು ಮನೆಯವರು ಮನೆಗೆ ಬೀಗ ಜಡಿದು ಬೆಂಗಳೂರಿಗೆ ಹೋಗಿದ್ದರು. ಈ ನಡುವೆ ಕಳವು ನಡೆದಿದೆ.
ವಿಷಯ ತಿಳಿದ ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು. ಹಲವು ಬೆರಳಚ್ಚು ತಜ್ಞರು ಕಳವು ನಡೆದ ಮನೆಗೆ ತಲುಪಿ ಅಲ್ಲಿಂದ ಬೆರಳಚ್ಚನ್ನು ಸಂಗ್ರಹಿಸಿದ್ದಾರೆ. ಮಾತ್ರವಲ್ಲ ಶ್ವಾನದಳವೂ ಆಗಮಿಸಿ ತನಿಖೆ ನಡೆಸುತ್ತಿದೆ. ಮನೆಯೊಳಗಿನ ಕಪಾಟು ಗಳನ್ನೆಲ್ಲಾ ಕಳ್ಳರು ಮುರಿದು ಅದರೊಳಗಿದ್ದ ಸಾಮಗ್ರಿಗಳನ್ನೆಲ್ಲಾ ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರ ಸಮೀಪದ ಮಚ್ಚಂ ಪಾಡಿ ಸಿ.ಎಂ. ನಗರ ನಿವಾಸಿ ಗಲ್ಫ್ ಉದ್ಯೋಗಿಯಾಗಿರುವ ಇಬ್ರಾಹಿಂ ಖಲೀಲ್ ಎಂಬವರ ಎರಡಂತಸ್ತಿನ ಮನೆಯಿಂದ 9 ಪವನ್ ಚಿನ್ನಾಭರಣ, 9 ಲಕ್ಷ ರೂ. ಹಾಗೂ 1 ರೇಡೋ ವಾಚ್ ಕಳವು ನಡೆದಿರುವುದಾಗಿ ದೂರಲಾಗಿದ. ಮನೆಯವರು ಗಲ್ಫ್‌ನಲ್ಲಿದ್ದು, ಮನೆಗೆ ಬೀಗ ಹಾಕಲಾಗಿದೆ. ಹೆಲ್ಮೆಟ್ ಧರಿಸಿದ ಇಬ್ಬರು ಮೊನ್ನೆ ಮನೆಯೊಳಗೆ ಕಳವು ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಲ್ಫ್‌ನಲ್ಲಿರುವ ಇಬ್ರಾಹಿಂ ಖಲೀಲ್ ಮನೆಗೆ ಕಳ್ಳರು ನುಗ್ಗಿದ ದೃಶ ವನ್ನು ಕಂಡು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಇಬ್ರಾಹಿಂ ಖಲೀಲ್‌ರ ಸಹೋದರ ಅಬೂಬಕ್ಕರ್ ಸಿದ್ದಿಕ್ ನೀಡಿದ ದೂರಿನಂತೆಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖ ಮುಂದುವರಿಸುತ್ತಿದ್ದಾರೆ. ಇಂದು ಬೆರಳಚ್ಚು ಹಾಗೂ ಶ್ವಾನದಳ ತಲುಪಿ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯ ವ್ಯಾಪಕಗೊಳ್ಳುತ್ತಿದ್ದು, ಆರೋಪಿಗಳನ್ನು ಸೆರೆಹಿಡಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಊರವರು ಆತಂಕ ಗೊಂಡಿದ್ದಾರೆ. ಹೆಚ್ಚಾಗಿ ಬೀಗ ಹಾಕಿದ ಮನೆಗಳನ್ನೇ ಆಯ್ಕೆ ಮಾಡಿ ತಂಡ ಕಳವು ನಡೆಸಲಾಗಿದೆ. ಕಳೆದ ತಿಂಗಳ 28ರಂದು ಉಪ್ಪಳ ಪತ್ವಾಡಿ ರಸ್ತೆಯಮೊಹಮ್ಮದಲಿ ಸ್ಟ್ರೀಟ್ ನಿವಾಸಿ ಕೊಲ್ಲಿ ಉದ್ಯೋಗಿ ಅಬ್ದುಲ್ ರಜಾಕ್ ಎಂಬವರ ಮನೆಯಿಂದ ೫ ಪವನ್ ಹಾಗೂ 30 ಸಾವಿರ ರೂ., ಉಪ್ಪಳ ಮಜಲ್ ನಿವಾಸಿ ಮೊಹಮ್ಮದ್ ರಫೀಕ್ ಎಂಬವರ ಮನೆಯಿಂದ 19ರಂದು 7 ಪವನ್ ಹಾಗೂ 60 ಸಾವಿರ ರೂ. ಕಳವುಗೈಯ್ಯಲಾಗಿದೆ. ಕುಟುಂಬ ಉಮ್ರಕ್ಕೆ ತೆರಳಿದ ಸಂದರ್ಭದಲ್ಲಿ ಕಳವು ನಡೆದಿದೆ. ಈ ತಿಂಗಳ ೫ರಂದು ಉಪ್ಪಳ ರೈಲ್ವೇ ನಿಲ್ದಾಣ ಪರಿಸರದಲ್ಲಿರುವ ಅಯ್ಯಪ್ಪ ಮಂದಿರದ ಶೆಡ್‌ನಲ್ಲಿ ನಿದ್ರಿಸುತ್ತಿದ್ದ ಉಪ್ಪಳ-ಪುತ್ತೂರು ಮಧ್ಯೆ ಸಂಚರಿಸುವ ಕರ್ನಾಟಕ ರಾಜ್ಯ ಸಾರಿಗೆ ಬಸ್ ಸಿಬ್ಬಂದಿಗಳ 11,112 ರೂ. ಕಳವುಗೈದ ಘಟನೆ ನಡೆದಿದೆ. ಕಳವು ವ್ಯಾಪಕಗೊಂಡಿರುವ ಹಿನ್ನೆಲೆಯಲ್ಲಿ ಊರವರು ಆತಂಕಗೊಂಡಿದ್ದಾರೆ. ಆರೋಪಿಗಳನ್ನು ಕೂಡಲೇ ಸೆರೆಹಿಡಿಯಬೇಕೆಂದು ಸಾರ್ವ ಜನಿಕರು ಆಗ್ರಹಿಸಿದ್ದಾರೆ.