ಮೊಗ್ರಾಲ್ ರಾ. ಹೆದ್ದಾರಿಯಲ್ಲಿ ವಾಹನ ಅಪಘಾತ: ಗಾಯಗೊಂಡ ಯುವಕ ಮೃತ್ಯು

ಕಾಸರಗೋಡು: ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಅಣಂಗೂರು ನಿವಾಸಿಯಾದ ಯುವಕ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಅಣಂಗೂರು ಬೆದಿರ ನಿವಾಸಿ ಬಿ.ಎಂ. ಇಬ್ರಾಹಿಂರ ಪುತ್ರ ನಿಯಾಸ್ (42) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನ ಅಪಘಾತ ಸಂಭವಿಸಿತ್ತು. ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಕಾರ್ಯಗಳಿಗಾಗಿ ನಿಲ್ಲಿಸಿದ್ದ ಕ್ರೇನ್‌ನ ಹಿಂಬದಿಗೆ ನಿಯಾಸ್ ಚಲಾಯಿಸಿದ ಪಿಕಪ್ ವ್ಯಾನ್ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ನಿಯಾಸ್‌ರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ವೇಳೆ ನಿಧನ ಸಂಭವಿಸಿದೆ.

ಮೃತರು ತಂದೆ, ತಾಯಿ ಸುಬೈದ, ಪತ್ನಿ ಫಾತಿಮ, ಮಕ್ಕಳಾದ ಬಿ.ಎನ್. ನೂಸ, ಇಬ್ರಾಹಿಂ ನದೀಂ, ಮುಹಮ್ಮದ್ ನಾಫಿಸ್, ನಾಸಿಯ ಮಿರ್ಸ, ನಿಫ ಮೆಹಸಿನ್, ಸಹೋದರ- ಸಹೋದರಿಯರಾದ ಅಶ್ರಫ್, ಅಸ್ರೀಫ, ಹಾಜಿರ, ಹಸೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page