ಮುಂಬಯಿ: ಮೊಬೈಲ್‌ನಲ್ಲಿ ನಿರಂತರ ಅಶ್ಲೀಲ ಸಿನಿಮಾ ವೀಕ್ಷಿಸುತ್ತಿದ್ದ ೧೪ರ ಹರೆಯದ ಮಗನನ್ನು ತಂದೆ ವಿಷ ಕುಡಿಸಿ ಕೊಲೆಗೈದ ಘಟನೆ ಮಹಾರಾಷ್ಟ್ರದ ಸೋಲಾಪುರ್‌ನಲ್ಲಿ ನಡೆದಿದೆ. ಈ ಸಂಬಂಧ ಸೋಲಾಪುರ್ ನಗರದಲ್ಲಿ ವಾಸಿಸುವ ವಿಜಯ್ ಬಟ್ಟು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಾಲಾ ತರಗತಿಗಳಲ್ಲಿ ಬಾಲಕ ನಿರಂತರವಾಗಿ ಮೊಬೈಲ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾನೆಂಬ ಬಗ್ಗೆ ದೂರು ಲಭಿಸಿದುದರಿಂದ ಕಂಗೆಟ್ಟ ವಿಜಯ್ ಬಟ್ಟು ಈ ಕೃತ್ಯಕ್ಕೆ ಮುಂದಾಗಿದ್ದಾರೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ.
ಜನವರಿ ೧೩ರಂದು ಪುತ್ರ ನಾಪತ್ತೆಯಾಗಿ ರುವುದಾಗಿ ತಿಳಿಸಿ ವಿಜಯ್ ಪೊಲೀಸರಿಗೆ ದೂರು ನೀಡಿದ್ದನು. ಈ ಬಗ್ಗೆ ಕೇಸು ದಾಖಲಿಸಿದ ಪೊಲೀಸರು ವಿಜಯ್‌ನ ಮನೆ ಪರಿಸರದಲ್ಲಿ ನಡೆಸಿದ ಶೋಧ ವೇಳೆ ಬಾಲಕನ ಮೃತದೇಹ ಪತ್ತೆಯಾಗಿತ್ತು. ಬಳಿಕ ನಡೆದ ತನಿಖೆಯಲ್ಲಿ ಬಾಲಕನ ಸಾವಿಗೆ ವಿಷ ಸೇವನೆ ಕಾರಣವೆಂದು ತಿಳಿದು ಬಂದಿದೆ. ಇದರಿಂದ ಸಂಶಯಗೊಂಡ ಪೊಲೀಸರು ವಿಜಯ್‌ನನ್ನು ತನಿಖೆಗೊಳಪಡಿಸಿದಾಗ ಬಾಲಕನಿಗೆ ವಿಷ ನೀಡಿ ಕೊಂದಿರುವುದು ವಿಜಯ್ ಆಗಿದ್ದಾನೆಂದು ತಿಳಿದು ಬಂದಿದೆ.