ಮಲಪ್ಪುರಂ: ಮೊಬೈಲ್ ಫೋನ್ ಚಾರ್ಜ್ ಮಾಡುತ್ತಿದ್ದ ವೇಳೆ ಪವರ್ ಬ್ಯಾಂಕ್ ಸ್ಫೋಟಗೊಂಡು ಮನೆ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ತಿರೂರು ತೆಕ್ಕನ್ ಕುಟ್ಟೂರುನ ಮೂಕಿಲಪೀಡಿಗ ಅತ್ತಂಬರಂಬ್ ಎಂಬಲ್ಲಿ ಘಟನೆ ನಡೆದಿದೆ. ಇಲ್ಲಿನ ಅಬೂಬಕರ್ ಸಿದ್ದಿಕ್ ಎಂಬವರ ಮನೆ ಬೆಂಕಿಗಾಹು ತಿಯಾಗಿದೆ. ದುರ್ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದುದರಿಂದ ಭಾರೀ ದುರಂತ ತಪ್ಪಿದೆ.
