ಕಾಸರಗೋಡು: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಇವಿಎಂವಿವಿ ಪ್ಯಾಟ್ ಯಂತ್ರಗಳನ್ನು ಬಳಸಿ ಮತದಾನ ಮಾಡುವುದು ಸೇರಿದಂತೆ ಮತದಾರರಲ್ಲಿ ಚುನಾವಣಾ ಜಾಗೃತಿ ಮೂಡಿಸಲು ಚೀಫ್ ಇಲೆಕ್ಟರಲ್ ಆಫೀಸರ್‌ರವರ ನಿರ್ದೇಶನವಿರುವ ಮೊಬೈಲ್ ಡೆಮೋಸ್ಟ್ರೇಶನ್ ವ್ಯಾನ್ ಜಿಲ್ಲೆಗೆ ತಲುಪಿದೆ. ಸಬ್ ಕಲೆಕ್ಟರ್ ಸುಫಿಯಾನ್ ಅಹಮ್ಮದ್ ಫ್ಲಾಗ್ ಆಫ್ ಮಾಡಿದರು. ನೆಟ್ಟಣಿಗೆ ಬಜ ಮಾಡೆಲ್ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಸಯನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಆಫೀಸರ್ ಟಿ.ಟಿ. ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಬೆನೆಟ್ ಥಾiಸ್ ಮಾತನಾಡಿದರು. ಪ್ರಿನ್ಸಿಪಾಲ್ ಕೆ, ನಿಲೀನಾ ಮುರಳಿ ಸ್ವಾಗತಿಸಿ, ಕಾಲೇಜು ಯೂನಿಯನ್ ಅಧ್ಯಕ್ಷ ಕೆ.ವಿ. ರಾಹುಲ್ ವಂದಿಸಿದ ರು. ಇಲೆಕ್ಟ್ರಾನಿಕ್ಸ್ ವೋಟಿಂಗ್ ಮಿಶನ್ ಬಳಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಜಿಲ್ಲಾ ಚುನಾವಣಾ ವಿಭಾಗದ ನೌಕರರಾದ ಪಿ. ಧನೇಶ್ ಉಪಸ್ಥಿತರಿ ದ್ದರು. ನಂತರ ವಿದ್ಯಾರ್ಥಿಗಳು ವಿವಿಧ ಕಲಾತ್ಮಕ ಕಾರ್ಯಕ್ರಗಳು ನಡೆದವು.







