ಮೊಬೈಲ್ ನೀಡಿಲ್ಲ: 8ನೇ ತರಗತಿ ವಿದ್ಯಾರ್ಥಿ ಶಾಲೆ ಬಳಿ ಆತ್ಮಹತ್ಯೆ
ಆಲಪ್ಪುಳ: ಹೆತ್ತವರು ಮೊಬೈಲ್ ನೀಡದ ಹಿನ್ನೆಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೈದಿದ್ದಾನೆ. ಎಡತ್ವ ತಲವಡಿ ಪಂ. ೮ನೇ ವಾರ್ಡ್ ಮಾಣಾಂ ತರ ನಿವಾಸಿ ಮೋಹನ್ ಲಾಲ್- ಅನಿತಾ ದಂಪತಿ ಪುತ್ರ ಆದಿತ್ಯನ್ (13) ನೇಣು ಬಿಗಿದು ಆತ್ಮಹತ್ಯೆಗೈದ ವಿದ್ಯಾರ್ಥಿ. ವೇದವ್ಯಾಸ ಶಾಲೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ನಿನ್ನೆ ಬೆಳಿಗ್ಗೆ ಮೊಬೈಲ್ ಗೇಮ್ ಆಡುವುದಕ್ಕಾಗಿ ತಾಯಿಯಲ್ಲಿ ಮೊಬೈಲ್ ಆಗ್ರಹಿಸಿದ್ದನಾ ದರೂ ಲಭಿಸದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ತೆರಳಿದ್ದಾನೆ. ಆ ಬಳಿಕ ಹುಡುಕಾಟದ ಮಧ್ಯೆ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಪೊಲೀಸರು ಕೇಸು ದಾಖಲಿಸಿದ್ದಾರೆ.