ಮೊಬೈಲ್ ಫೋನ್ ಗೇಮಿಂಗ್‌ಗೆ ನೀಡದ ದ್ವೇಷ: ತಾಯಿಗೆ ಇರಿದು ಗಾಯಗೊಳಿಸಿದ 14ರ ಬಾಲಕ
ಕಲ್ಲಿಕೋಟೆ: ಗೇಮಿಂಗ್‌ಗಾಗಿ ಮೊಬೈಲ್ ಫೋನ್ ನೀಡದ ದ್ವೇಷದಿಂದ ಬಾಲಕನೋರ್ವ ತನ್ನ ತಾಯಿಗೆ ಇರಿದು ಗಾಯಗೊಳಿಸಿದ ಘಟನೆ ಕಲ್ಲಿಕೋಟೆಯಲ್ಲಿ ನಡೆದಿದೆ. ಕಲ್ಲಿಕೋಟೆ ತಿಕ್ಕೋಡಿ ಕಾರೆಕ್ಕೋಡ್ ಎಂಬಲ್ಲಿ 14ರ ಹರೆಯದ ಬಾಲಕ ಈ ಕೃತ್ಯವೆಸಗಿದ್ದಾನೆ. ಬಾಲಕ ಮೊಬೈಲ್ ಗೇಮಿಂಗ್‌ನಲ್ಲಿ ನಿರತನಾಗಿದ್ದನೆಂದು ಹೇಳಲಾಗುತ್ತಿದೆ. ಈತ ಈ ಹಿಂದೆಯೇ ಶಿಕ್ಷಣ ಕೊನೆಗೊಳಿಸಿದ್ದನು. ಕಳೆದ ದಿನ ರಾತ್ರಿ ಫೋನ್‌ನಲ್ಲಿ ಇಂಟರ್‌ನೆಟ್ ಮುಗಿದ ಹಿನ್ನೆಲೆಯಲ್ಲಿ ರೀಚಾರ್ಜ್ ಮಾಡುವಂತೆ ಬಾಲಕ ತಾಯಿಯನ್ನು ಒತ್ತಾಯಿಸಿದ್ದನು. ಆದರೆ ಹಣವಿಲ್ಲ ದುದರಿಂದ ರೀಚಾರ್ಜ್ ನಡೆಸಲು ಸಾಧ್ಯವಿಲ್ಲವೆಂದು ತಾಯಿ ತಿಳಿಸಿದಾಗ ಬಾಲಕ ಫೋನ್ ಕೇಳಿದ್ದಾನೆ. ಈ ವೇಳೆ ಫೋನ್ ನೀಡಲು ತಾಯಿ ನಿರಾಕರಿಸಿ ದಾಗ ಬಾಲಕ ರೋಷಗೊಂಡು ನಿದ್ರಿಸುತ್ತಿದ್ದ ತಾಯಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಗಾಯಾಳುವನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಪಯ್ಯೋಳಿ ಪೊಲೀಸರು ಕೇಸು ದಾಖಲಿಸಿ ಬಾಲಕ ಹಾಗೂ ತಾಯಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.