ಮೊಯ್ದೀನ್‌ರಿಗೆ ಮತ್ತೆ ಇ.ಡಿ ನೋಟೀಸ್ ದಾಖಲೆ ಹಾಜರುಪಡಿಸಲು ನಿರ್ದೇಶ

ಕೊಚ್ಚಿ: ಕರುವನ್ನೂರು ವಂಚನೆ ಪ್ರಕರಣದಲ್ಲಿ ಸಿಪಿಎಂ ಮುಖಂಡ,   ಮಾಜಿ ಸಚಿವ, ಶಾಸಕ ಎ.ಸಿ. ಮೊಯ್ದೀನ್‌ರಿಗೆ ಮತ್ತೆ ಇ.ಡಿ ನೋಟೀಸು ನೀಡಿದೆ. ಸೋಮವಾರ ವಿಚಾರಣೆಗೆ ಹಾಜರಾಗಬೇಕೆಂದು, ೧೦ ವರ್ಷದ ತೆರಿಗೆ ದಾಖಲೆಗಳನ್ನು ಹಾಜರುಪಡಿಸಬೇಕೆಂದು ಇ.ಡಿ ನೀಡಿದ ನೋಟೀಸಿನಲ್ಲಿ ಸ್ಪಷ್ಟಪಡಿಸಿದೆ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಇಂದು ಹಾಜರಾಗಬೇಕೆಂದು ಇ.ಡಿ ಈ ಮೊದಲು ಮೊಯ್ದೀನ್‌ರಿಗೆ ನೋಟೀಸು ನೀಡಿತ್ತು. ಆದರೆ ಇಂದು ಹಾಜರಾಗಲು ಅಸೌಕರ್ಯವಿದೆಯೆಂದು ತೋರಿಸಿ ಇ-ಮೈಲ್ ಕಳುಹಿಸಿದ ಹಿನ್ನೆಲೆಯಲ್ಲಿ ಸೋಮವಾರ ಹಾಜರಾಗಬೇಕೆಂದು ಆಗ್ರಹಿಸಿ ಇ.ಡಿ  ಮತ್ತೆ ನೋಟೀಸು ಕಳುಹಿಸಿದೆ. ಕರುವನ್ನೂರು ಬ್ಯಾಂಕ್‌ನ  ಸಾಲ ವಂಚನೆ, ಕಪ್ಪುಹಣವನ್ನು ಬಿಳುಪುಗೊಳಿಸಿರುವುದರ ತನಿಖೆಯಂ ಗವಾಗಿ ಇ.ಡಿ ಅಧಿಕಾರಿಗಳು ಸಿಪಿಎಂ ರಾಜ್ಯ ಸಮಿತಿ ಸದಸ್ಯನಾಗಿರುವ ಮೊಯ್ದೀನ್‌ರ ಮನೆಗೆ ದಾಳಿ ನಡೆಸಿ ವಿಚಾರಣೆ ನಡೆಸಲು ಹಾಜರಾಗ ಬೇಕೆಂದು ಆಗ್ರಹಿಸಿದೆ. ಆದರೆ ಪುದುಪ್ಪಳ್ಳಿ ವಿಧಾನಸಭಾ ಮಂಡಲ ಉಪಚುನಾವಣೆಗೆ ಮುಂಚಿತವಾಗಿ ವಿಚಾರಣೆಗೆ ಹಾಜರಾದರೆ ಅದು ಪಕ್ಷಕ್ಕೆ ಹೊಡೆತ ನೀಡಬಹುದೆಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹಾಜರಾಗಲು ಸಾಧ್ಯವಿಲ್ಲವೆಂ ದು ನೋಟೀಸಿಗೆ ಉತ್ತರ ಕಳುಹಿಸಲಾ ಗಿದೆ. ಆದರೆ ಇ.ಡಿ ಮತ್ತೆ ನೋಟೀಸು ಕಳುಹಿಸಿದ ಹಿನ್ನೆಲೆಯಲ್ಲಿ ಮೊಯ್ದೀನ್‌ರ ನಿಲುವು ಏನೆಂಬು ವುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

You cannot copy contents of this page