ಯಕ್ಷಗಾನ ಕಲಾವಿದ ನಿಧನ
ಬೆಳ್ಳೂರು: ನೆಟ್ಟಣಿಗೆ ಚೌಕಾಡಿ ನಿವಾಸಿ ಗೋವಿಂದ ಭಟ್ (78) ನಿಧನ ಹೊಂದಿದರು. ಇವರು ಯಕ್ಷಗಾನ ಕಲಾವಿದರೂ, ಪಾಕತಜ್ಞರೂ ಆಗಿದ್ದರು. ಮೃತರು ಪತ್ನಿ ಕೆ. ಶಾರದ, ಮಕ್ಕಳಾದ ರಾಮಕೃಷ್ಣ ಭಟ್, ಸಂಧ್ಯಾ, ಸ್ವರ್ಣ, ಸೌಮ್ಯ, ಅಳಿಯ- ಸೊಸೆಯಂದಿರಾದ ಕೃಷ್ಣಮೂರ್ತಿ, ಪ್ರಸಾದ್, ಸುಬ್ರಹ್ಮಣ್ಯ ಶರ್ಮ, ವೈಷ್ಣವಿ, ಸಹೋದರಿಯರಾದ ಶಾರದ, ಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಕೇಶವ ಭಟ್ ಈ ಹಿಂದೆ ನಿಧನ ಹೊಂದಿದ್ದಾರೆ.