ಯಕ್ಷಮಿತ್ರರು ಮಾನ್ಯ ಸಂಸ್ಥೆಯ 24ನೇ ವಾರ್ಷಿಕ ಸಂಭ್ರಮ ನಾಳೆ: ಯಕ್ಷಗಾನ ಕಲಾವಿದರಿಗೆ ಸನ್ಮಾನ, ಯಕ್ಷಗಾನ ಬಯಲಾಟ
ಮಾನ್ಯ: ಮಾನ್ಯದಲ್ಲಿ ಮಣ್ಣಿನ ಕಲೆ ಯಕ್ಷಗಾನದ ಜೀವದುಸಿರನ್ನು ಕಾಪಾಡಿ ಹೊಸ ತಲೆಮಾರಿಗೆ ಕಲೆಯ ಒಲವನ್ನು ಕೈದಾಟಿಸಿದ ಯಕ್ಷ ಮಿತ್ರರು ಸಾಂಸ್ಕೃತಿಕ ಸಂಘ ಮಾನ್ಯ ಇದರ 25ನೇ ವಾರ್ಷಿ ಕೋತ್ಸವ ನಾಳೆ ಮಾನ್ಯ ಜ್ಞಾನೋದಯ ಶಾಲಾ ಮೈದಾನದಲ್ಲಿ ನಡೆಯಲಿದೆ.
ನಾಳೆ ಸಂಜೆ 6.30ಕ್ಕೆ ಸನ್ಮಾನ ಸಮಾರಂಭ ನಡೆಯಲಿರುವುದು. ಎಡನೀರು ಮಠಾಧೀಶ ಶ್ರೀ ಸಚ್ಚಿದಾ ನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಯಕ್ಷ ಮಿತ್ರರು ಮಾನ್ಯ ಇದರ ನಿರ್ದೇಶಕ, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಮಾನವ ಹಕ್ಕು ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ವಿಶೇಷ ಅಭ್ಯಾಗತರಾಗಿರುವರು. ಈ ಸಂದರ್ಭ ದಲ್ಲಿ ತೆಂಕು ತಿಟ್ಟು ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಚೆಂಡೆವಾದಕ ದೇಲಂತ ಮಜಲು ಸುಬ್ರಹ್ಮಣ್ಯ ಭಟ್, ಯಕ್ಷಗಾನ ತಿರುಗಾಟದ ಬೆಳ್ಳಿಹಬ್ಬವನ್ನು ಕಂಡಿರುವ ಪ್ರತಿಭಾವಂತ ಸ್ತ್ರೀ ವೇಷಧಾರಿ ಸಂತೋಷ್ ಕುಮಾರ್ ಹಿಲಿಯಾಣ ಎಂಬಿವರನ್ನು ಸನ್ಮಾನಿಸಿ ಗೌರವಿಸಲಾಗುವುದು. ವಾಸುದೇವ ರಂಗ ಭಟ್ ಮಧೂರು, ಹರೀಶ ಬೊಳಂತಿ ಮೊಗರು, ಪೆರ್ಮುದೆ ಜಯ ಪ್ರಕಾಶ್ ಶೆಟ್ಟಿ ಅಭಿನಂದನಾ ಭಾಷಣ ಮಾಡು ವರು. ಹಲವರು ಉಪಸ್ಥಿತರಿರುವರು. ಬಳಿಕ ಗಂಟೆ 7ರಿಂದ ಶ್ರೀ ಕೋದಂಡ ರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಅವರಿಂದ ಯಕ್ಷಗಾನ ಬಯಲಾಟ ಸಾಕೇತ ಸಾಮ್ರಾಜ್ಞಿ ಪ್ರದರ್ಶನಗೊಳ್ಳಲಿದೆ.