ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ಎಕ್ಸ್‌ಪೋ ಸ್ಯಾಟ್ ಉಪಗ್ರಹ
ಶ್ರೀಹರಿಕೋಟಾ: ಹೊಸ ವರ್ಷದ ಮೊದಲ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಇತಿಹಾಸಿಕ ಸಾಧನೆ ಮಾಡಿದೆ.
ಎಕ್ಸ್ ರೇ ಮೂಲಗಳ ನಿಗೂಢತೆ ಹಾಗೂ ಕಪ್ಪು ರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಇಸ್ರೋ ನಿರ್ಮಿತ ಎಕ್ಸ್‌ರೇ-ಪೋಲಾರಿ ಮೀಟರ್ ಉಪಗ್ರಹ (ಎಕ್ಸ್‌ಪೋ ಸ್ಯಾಟ್)ವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾ ದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ ೯.೧೦ಕ್ಕೆ ಎಕ್ಸ್‌ಪೋ ಸ್ಯಾಟ್ ಸೇರಿದಂತೆ ೧೦ ಉ ಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕವು ಯಶಸ್ವಿ ಯಾಗಿ ನಭಕ್ಕೆ ಚಿಮ್ಮಿದೆ. ಇದು ಮೊದಲ ಸಂಪೂರ್ಣ ವೈಜ್ಞಾನಿಕ ಉಪಗ್ರಹವಾಗಿದೆ.
ಹೊಸ ವರ್ಷ ೨೦೨೪ರಲ್ಲಿ ಹೆಚ್ಚಿನ ಸವಾಲುಗಳ ಯೋಜನೆ ಗಳನ್ನೂ ಕಾರ್ಯಗತಗೊಳಿಸಲು ಇಸ್ರೋ ಸಿದ್ಧತೆ ನಡೆಸಿದೆ. ೨೦೨೩ರಲ್ಲಿ ಚಂದ್ರನು ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ ಬಳಿಕ ಇಸ್ರೋ ಇಂದು ಈ ಐತಿಹಾಸಿಕ ಸಾಧನೆ ಮಾಡಿದೆ.
ಇಸ್ರೋದ ಪ್ರಯತ್ನ ಇಲ್ಲಿಗೇ ಮುಗಿಯುವುದಿಲ್ಲ. ಸಮುದ್ರದಾಳದ ಸಂಶೋಧನೆಗೂ ಇಸ್ರೋ ಒತ್ತು ನೀಡಿದ್ದು, ಇದರಂತೆ ಸಮುದ್ರದಲ್ಲಿ ೫೦೦ ಮೀಟರ್ ಆಳಕ್ಕೆ ಜಲಾಂತರ್ಗಾಮಿಗಳನ್ನು ಮಾರ್ಚ್ ನಲ್ಲಿ ಕಳುಹಿಸಿಕೊಡುವ ಸಿದ್ಧತೆಯಲ್ಲೂ ತೊಡಗಿವೆ. ಅಲ್ಲದೆ ಈ ವರ್ಷ ನಾಸಾ ಮತ್ತು ಇಸ್ರೋ ಜಂಟಿಯಾಗಿ ೧.೨ ಬಿಲಿಯನ್ ಡಾಲರ್ ವೆಚ್ಚದ ನಿಸಾರ್ ಉಪಗ್ರಹ ಉಡಾವಣೆಯನ್ನೂ ನಡೆಸಲಿದೆ. ಇದು ತಾಪಮಾನ ಬದಲಾವಣೆ ಅಧ್ಯಯನ ಉದ್ದೇಶದಿಂದ ಅತ್ಯಂತ ದುಬಾರಿ ಉಪಗ್ರಹಗಳಾಗಲಿವೆ.
ಇನ್ನೊಂದೆಡೆ ಜನವರಿ ೬ರಂದು ಸಂಜೆ ೪ ಗಂಟೆಗೆ ಸರಿಯಾಗಿ ಆದಿತ್ಯ ಎಲ್-೧ ಉಪಗ್ರಹವನ್ನು ಲಾಂಗ್ರೇಜ್ -೧ಕ್ಕೆ ತಲುಪಿಸುವ ಕಾರ್ಯದಲ್ಲೂ ಇಸ್ರೋ ನಿರತವಾಗಿದೆ.