ಯುವಕನನ್ನು ಅಪಹರಿಸಿ ದೌರ್ಜನ್ಯವೆಸಗಿದ ಪ್ರಕರಣ: ಓರ್ವ ಸೆರೆ
ಕಾಸರಗೋಡು: ಆರ್ಥಿಕ ವ್ಯವ ಹಾರದ ಹೆಸರಲ್ಲಿ ಯುವಕನನ್ನು ಅಪಹರಿಸಿ ಹಲ್ಲೆ ಗೈದ ಪ್ರಕರಣದ ಆರೋಪಿಗಳ ಪೈಕಿ ಓರ್ವನ್ನು ಮೇ ಲ್ಪರಂಬ ಪೊಲೀಸ್ ಇನ್‌ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ನೇತೃ ತ್ವದ ಪೊಲೀಸರು ಬಂಧಿಸಿದ್ದಾರೆ.
ಆಲಂಪಾಡಿ ಅಕ್ಕರಪಳ್ಳ ನಿವಾಸಿ ಅಮೀರಲಿ (26) ಬಂಧಿತ ಆರೋಪಿ. ಈತ ಈ ಪ್ರಕರಣದ ಆರನೇ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಶುಕ್ರವಾರ ಮಧ್ಯಾಹ್ನ ಚಟ್ಟಂಚಾಲ್ ಕುನ್ನಾರದ ಕೆ. ಅರ್ಶಾದ್ (26) ಎಂಬಾತ ಕುನ್ನಾ ಸೂಪರ್ ಮಾರ್ಕೆಟ್ ಬಳಿ ತನ್ನ ಸ್ನೇಹಿತ ಫಸಲ್ ಪಹದ್ ಜತೆ ಮಾತನಾಡುತ್ತಿದ್ದ ವೇಳೆ ಕಾರಿನಲ್ಲಿ ಅಲ್ಲಿಗೆ ಬಂದ ಅಕ್ರಮಿಗಳ ತಂಡ ಅರ್ಶಾದ್‌ನನ್ನು ಬಲವಂತವಾಗಿ ಕಾರಿಗೇರಿಸಿ ಅಪಹರಿಸಿತ್ತು. ಆ ಬಗ್ಗೆ ಸ್ನೇಹಿತ ಫಸಲ್ ಫಹದ್ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದನು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಪಹರಣಗಾರರ ತಂಡ ದವರು ಮೊದಲು ನನ್ನನ್ನು ವಿದ್ಯಾನಗರ-ಮಾನ್ಯ ರಸ್ತೆಯ ಚಿತ್ತಾರಿಕುನ್ನಿನ ಜನವಾಸವಿಲ್ಲದ ಮನೆಗೆ ಸಾಗಿಸಿ ಅಲ್ಲಿ ತನಗೆ ಹಲ್ಲೆ ನಡೆಸಿದ್ದರೆಂದೂ, ನಂತರ ನನ್ನನ್ನು ತಾಮರಶ್ಶೇರಿಗೆ ಕರೆದೊಯ್ದು ಕಳೆದ ಶನಿವಾರ ಬಿಡುಗಡೆಗೊಳಿಸಿ ದರೆಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಅರ್ಶಾದ್ ತಿಳಿಸಿದ್ದಾನೆ.
ಬಂಧಿತ ಆರೋಪಿ ಅಮೀರಲಿ ವಿರುದ್ಧ ವಿದ್ಯಾನಗರ, ಬದಿಯಡ್ಕ, ಹೊಸದುರ್ಗ ಮತ್ತು ಕಾಸರಗೋಡು ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಆತನ ವಿರುದ್ಧ ಈ ಹಿಂದೆ ವಿದ್ಯಾನಗರ ಪೊಲೀಸರು ಕಾಪಾ ಕಾನೂನನ್ನು ಹೇರಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಇತರ ಆರೋಪಿಗಳ ಪತ್ತೆಗಾಗಿರುವ ಶೋಧ ಇನ್ನೂ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.