ಯುವಕನನ್ನು ಅಪಹರಿಸಿ ಬೆದರಿಕೆ: ಕೇಸು ದಾಖಲು

ಬದಿಯಡ್ಕ: ಯುವಕನನ್ನು ಕಾರಿನಲ್ಲಿ ಅಪಹರಿಸಿ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಮೂವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ನೀರ್ಚಾಲು ಗೋಳಿಯಡ್ಕ ಹೌಸ್‌ನ ಮೊಹಮ್ಮದ್ ಅಲ್ತಾಫ್ (30) ಎಂಬಾತ ಈ ದೂರು ನೀಡಿದ್ದು ಅದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜೂನ್ 17ರಂದು ಸೀತಾಂಗೋಳಿ ಪೆಟ್ರೋಲ್ ಬಂಕ್‌ನ ಬಳಿಯಿಂದ ಮೂವರ ತಂಡ ತನ್ನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋದರೆಂದೂ, ಅದರಲ್ಲಿ ಓರ್ವ ಚಾಕು ತೋರಿಸಿ ತನಗೆ ಬೆದರಿಕೆ ಒಡ್ಡಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಲ್ತಾಫ್ ಆರೋಪಿಸಿದ್ದಾನೆ. ಆರ್ಥಿಕ ವ್ಯವಹಾರವೇ ಇದಕ್ಕೆ ಕಾರಣವೆಂದೂ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page