ಯುವಕನನ್ನು ಆಟೋರಿಕ್ಷಾದಲ್ಲಿ ಅಪಹರಿಸಿ ಚಿನ್ನದ ಸರ, ಹಣ, ಮೊಬೈಲ್ ದರೋಡೆ: 15 ಮಂದಿ ತಂಡದ ಕೃತ್ಯ
ಕುಂಬಳೆ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕನನ್ನು ತಂಡವೊಂದು ಅಪಹರಿಸಿ ಹಲ್ಲೆಗೈದು ಗಂಭೀರ ಗಾಯಗೊಳಿಸಿ ಚಿನ್ನದ ಸರ, ಹಣ ಹಾಗೂ ಮೊಬೈಲ್ ಫೋನ್ ದರೋಡೆಗೈದು ಪರಾರಿಯಾದ ಘಟನೆ ನಡೆದಿದೆ. ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ೧೫ ಮಂದಿ ತಂಡ ಈ ಕೃತ್ಯ ನಡೆಸಿರುವುದಾಗಿ ದೂರಲಾಗಿದೆ.
ಹಲ್ಲೆಯಿಂದ ಗಂಭೀರ ಗಾಯ ಗೊಂಡಿರುವ ಕಡಂಬಾರ್ ಅರಿ ಮಲೆಯ ಪ್ರವೀಣ್ ಎ. (32) ಎಂ ಬವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ಸಂಜೆ ಇವರು ಕಡಂ ಬಾರ್‌ನಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್, ಕಾರು ಹಾಗೂ ಆಟೋರಿಕ್ಷಾದಲ್ಲಿ ತಲುಪಿದ 15 ಮಂದಿ ತಂಡ ಹಲ್ಲೆಗೈದು ಆಟೋರಿಕ್ಷಾಕ್ಕೆ ಹತ್ತಿಸಿ ಬಳಿಕ ಬಂದ್ಯೋಡು ಅಡ್ಕ ವೀರನಗರಕ್ಕೆ ತಲುಪಿಸಿ ಅಲ್ಲಿಯೂ ಹಲ್ಲೆಗೈದು ಅವರ ಕುತ್ತಿಗೆಯಲ್ಲಿದ್ದ 1 ಪವನ್ ಚಿನ್ನದ ಸರ, ಜೇಬಿನಲ್ಲಿದ್ದ 12,200 ರೂ. ಹಾಗೂ ಮೊಬೈಲ್ ಫೋನ್ ಕಸಿದು ತಂಡ ಪರಾರಿಯಾಗಿರುವುದಾಗಿ ದೂರಲಾಗಿದೆ.
ತಂಡ ಅಲ್ಲಿಂದ ತೆರಳಿದ ಬಳಿಕ ಪ್ರವೀಣ್ ಸ್ನೇಹಿತನ ಮನೆಗೆ ತೆರಳಿದ್ದರು. ಅನಂತರ ಸ್ನೇಹಿತನ ಸಹಾಯದೊಂದಿಗೆ ಕುಂಬಳೆಯ ಆಸ್ಪತ್ರೆಗೆ ತಲುಪಿಸಿ ದಾಖಲಾಗಿದ್ದಾರೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಆಸ್ಪತ್ರೆಗೆ ತಲುಪಿ ಗಾಯಾಳುವಿನಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಯುವಕನಿಗೆ ಹಲ್ಲೆಗೈದು ಗಾಯಗೊಳಿಸಲು ಕಾರಣವೇನೆಂದು ತಿಳಿದುಬಂದಿಲ್ಲವೆನ್ನಲಾಗಿದೆ.