ಯುವಕನನ್ನು ಮದ್ಯ ಸಹಿತ ಸೆರೆ ಹಿಡಿದು ಪೊಲೀಸರ ವಶಕ್ಕೆ

ಕುಂಬಳೆ: ನಾಡಿನ ಶಾಂತಿ, ಸಮಾಧಾನವನ್ನು ನಾಶಪಡಿಸುವ ಮಾದಕ ಮಾಫಿಯಾ ತಂಡದ ವಿರುದ್ಧ ಕಠಿಣ ಕ್ರಮಗಳೊಂದಿಗೆ ಬಂದ್ಯೋಡು ಅಡ್ಕ ನಿವಾಸಿಗಳು ರಂಗಕ್ಕಿಳಿದಿದ್ದಾರೆ. ಮಾರಾಟಕ್ಕೆ  ಕೊಂಡು ಹೋಗುತ್ತಿದ್ದ ೩೧ ಪ್ಯಾಕೆಟ್ ಮದ್ಯ ಸಹಿತ ಯುವಕನನ್ನು ಸೆರೆಹಿಡಿ ದು  ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅಡ್ಕ ವೀರನಗರದ ಗಂಗಾಧರನ್ ಯಾನೆ ಗಣೇಶ್ (೨೩)ನನ್ನು ಸೆರೆಹಿಡಿಯಲಾಗಿದೆ. ಈತನ ವಿರುದ್ಧ ಕೇಸು ದಾಖಲಿಸಿ ಬಂಧಿಸಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಸಳೀಯರು ಈತನನ್ನು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿ ಸಿದ್ದರು. ಕಳೆದ ಎರಡು ದಿನದ ಹಿಂದೆ ಗಾಂಜಾದೊಂದಿಗೆ ಯುವಕನನ್ನು ಸೆರೆಹಿಡಿಯಲಾಗಿತ್ತು.  ಮಾದಕ ಮಾಫಿಯಾ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುವುದಕ್ಕಾಗಿ ಸ್ಥಳೀಯರ ನೇತೃತ್ವದಲ್ಲಿರುವ ಸಭೆ ಇಂದು ಸಂಜೆ ಜರಗಲಿದೆ. ಸಭೆಯಲ್ಲಿ ಸಮಿತಿ ರೂಪೀ ಕರಿಸಿ  ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ನಿರ್ದೇಶ ಪ್ರಕಾರ ಕಾರ್ಯಾಚರಿ ಸಲು ಸ್ಥಳೀಯರು ತೀರ್ಮಾನಿಸಿದ್ದಾರೆ.

RELATED NEWS

You cannot copy contents of this page