ಯುವಕನ ಕೊಲೆ: ಇಬ್ಬರು ಆರೋಪಿಗಳು ಗಲ್ಫ್‌ಗೆ ಪರಾರಿ; ನಾಲ್ಕು ಮಂದಿಗಾಗಿ ಬೆಂಗಳೂರು, ಗೋವಾದಲ್ಲಿ ಶೋಧ

ಮಂಜೇಶ್ವರ: ಮೀಯಪದವು ಮದಕ್ಕಳ ನಿವಾಸಿ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (೨)ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗಲು ಬಾಕಿಯಿರುವ  ಆರು ಮಂದಿ ಆರೋಪಿಗಳಿಗಾಗಿ ಮಂಜೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.  ಈ ಆರು ಮಂದಿ ಆರೋಪಿಗಳ ಪೈಕಿ ಇಬ್ಬರು ಗಲ್ಫ್‌ಗೆ ಪರಾರಿಯಾಗಿ ದ್ದಾರೆಂದು ತಿಳಿದುಬಂದಿದೆ. ಅವರನ್ನು ಊರಿಗೆ ತಲುಪಿಸಲಿರುವ ಪ್ರಯತ್ನ ಮುಂದುವರಿಯುತ್ತಿದೆ.

ಇದೇ ವೇಳೆ ಮತ್ತೆ ನಾಲ್ಕು ಮಂದಿ  ಆರೋಪಿಗಳು ಬೆಂಗಳೂ ರು ಹಾಗೂ ಗೋವಾದಲ್ಲಿ ತಲೆಮರೆಸಿಕೊಂಡಿದ್ದಾರೆಂದೂ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಶೋಧ ಕಾಂiiವನ್ನು ಅತ್ತ ವಿಸ್ತರಿಸಲಾಗಿದೆ.  ಮೊಯ್ದೀನ್ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕುಂಜತ್ತೂರು  ಕಣ್ವ ತೀರ್ಥ ಇರ್ಶಾದ್ ಮಂಜಿಲ್‌ನ ಅಬ್ದುಲ್ ರಶೀದ್ (೨೮), ಕುಂಜತ್ತೂರು ಕಣ್ವತೀರ್ಥ ರೈಲ್ವೇ ಗೇಟ್ ಬಳಿಯ ನಿವಾಸಿಗಳಾದ ಶೌಕತ್ತಲಿ (೩೯), ಅಬೂಬಕ್ಕರ್ ಸಿದ್ದಿಕ್ (೩೩) ಎಂಬಿವರನ್ನು ಈಗಾಗಲೇ ಸೆರೆಹಿಡಿದಿದ್ದು, ಅವರೀಗ ರಿಮಾಂಡ್‌ನಲ್ಲಿದ್ದಾರೆ.  ಈ ತಿಂಗಳ ೩ರಂದು  ರಾತ್ರಿ ಗಾಂಜಾ ಸೇವಿಸಿ ಬೊಬ್ಬೆ ಹಾಕಿದ ಆರೋಪದಂತೆ ಮೊಯ್ದೀನ್ ಆರಿಫ್‌ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಇದೀಗ ಸೆರೆಗೀಡಾದ ಆರೋಪಿಗಳ   ಪೈಕಿ ಓರ್ವನಾದ ಅಬ್ದುಲ್ ರಶೀದ್ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದಿದ್ದನ. ಬಳಿಕ  ತಂಡ ಮೊಯ್ದೀನ್ ಆರಿಫ್‌ಗೆ ಹಲ್ಲೆಗೈದು ಗಾಯಗೊಳಿಸಿತ್ತೆನ್ನಲಾಗಿದೆ.  ಮೊಯ್ದೀನ್ ಆರಿಫ್ ಮರುದಿನ ಮನೆಯಲ್ಲಿ ರಕ್ತವಾಂತಿ ಮಾಡಿದ್ದನು. ಇದರಿಂದ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.

ಇದೇ ವೇಳೆ ಮೃತದೇಹದಲ್ಲಿ ಗಾಯಗಳು ಕಂಡುಬಂದ ಹಿನ್ನೆಲೆಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು  ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ಹಲ್ಲೆಗಾಯಗಳಾಗಿವೆಯೆಂದು ತಿಳಿದುಬಂದಿತ್ತು. ಇದರಿಂದ ಅಬ್ದುಲ್ ರಶೀದ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ಗೊಳಪಡಿಸಿದಾಗ ತಂಡ ಹಲ್ಲೆಗೈದ ವಿಷಯ ತಿಳಿದುಬಂದಿತ್ತು.

ಇದೇ ವೇಳೆ  ಮೊಯ್ದೀನ್ ಆರಿಫ್‌ಗೆ ತಂಡ ಹಲ್ಲೆಗೈಯ್ಯಲು ಕಾರಣವೇನೆಂದು ತಿಳಿದುಬಂದಿಲ್ಲ. ಇದೀಗ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದರೆ ಮಾತ್ರವೇ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಿದೆಯೆಂದು ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

You cannot copy contents of this page