ಕಣ್ಣೂರು: ಯುವಕನ ಬ್ಯಾಗ್ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಯನ್ನು ಅಮಾನತು ಗೊಳಿಸಲಾಗಿದೆ. ಕಣ್ಣೂರು ಟ್ರಾಫಿಕ್ ಎನ್ಫೋರ್ಸ್ಮೆಂಟ್ ಎಸ್ಐ ಜಯಕುಮಾರ್ರನ್ನು ಅಮಾನತು ಗೊಳಿಸಿ ಸಿಟಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಕಳೆದ ತಿಂಗಳು ಬೆಂಗಳೂರಿಗೆ ತೆರಳಲೆಂದು ತಂದೆಯೊಂದಿಗೆ ಕುಡುಕಿಮೊಟ್ಟ ಎಂಬಲ್ಲಿ ಬಸ್ಗೆ ಕಾದು ನಿಂತಿದ್ದ ವೇಳೆ ಅಲ್ಲಿಗೆ ತಲುಪಿದ ಎಸ್ಐ ಯುವಕನ ಕೈಯಿಂದ ಬ್ಯಾಗ್ ಅಪಹರಿಸಿರುವುದಾಗಿ ದೂರಲಾಗಿದೆ.







