ಯುವಕನ ಮೃತದೇಹ ಕಾಲುವೆಯಲ್ಲಿ ಪತ್ತೆ : ಕೊಲೆಯೆಂದು ಶಂಕೆ
ಕೊಚ್ಚಿ: ಕಾಲುವೆಯಲ್ಲಿ ಯುವಕನ ಮೃತದೇಹ ಪತ್ತೆಹಚ್ಚಿದ ಘಟನೆಯಲ್ಲಿ ಗೆಳೆಯ ಜಿಶಿ ಸೆರೆಯಾ ಗಿದ್ದಾನೆ. ಎರೂರು ಪೆರಿಕ್ಕಾಡ್ ತಂಬಿ ಎಂದು ಕರೆಯುವ ಸನಲ್ನನ್ನು ಎರೂರಿನ ಕಾಲುವೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಸನಲ್ ಹಾಗೂ ಜಿಶಿ ಮಧ್ಯೆ ಮದ್ಯಪಾನದ ವೇಳೆ ಗಲಾಟೆ ಉಂಟಾಗಿದ್ದು, ಆ ಬಳಿಕ ಕೊಲೆ ನಡೆಸಿರಬೇಕೆಂದು ಪೊಲೀಸರು ತಿಳಿಸಿದ್ದಾರೆ. ಈವೇಳೆ ಇತರ ಇಬ್ಬರು ಗೆಳೆಯರು ಇವರ ಜೊತೆ ಇದ್ದರೆನ್ನ ಲಾಗಿದೆ. ಇವರು ತೆರಳಿದ ಬಳಿಕ ಸನಲ್ ಹಾಗೂ ಜಿಶಿ ಮಧ್ಯೆ ವಾಗ್ವಾದ ವುಂಟಾಗಿ ರುವುದಾಗಿ ತಿಳಿಯಲಾಗಿದೆ. ನಿನ್ನೆ ಮುಂಜಾನೆ 2 ಗಂಟೆ ವೇಳೆಗೆ ಮೃತದೇಹ ಪತ್ತೆಯಾ ಗದೆ. ಮೃತದೇಹವನ್ನು ತೃಪುಣಿತ್ತರ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.