ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಉದಿನೂರ್‌ನಲ್ಲಿ ಯುವಕ ಹಿತ್ತಿಲಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಉದಿನೂರು ವಡಕ್ಕೇಪುರ ನಿವಾಸಿ ಕೆ. ರಾಜೀವನ್ (45) ಮೃತಪಟ್ಟವರು. ನಿನ್ನೆ ಮಧ್ಯಾಹ್ನ ಇವರನ್ನು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಚಂದೇರ ಪೊಲೀ ಸರು ಸ್ಥಳಕ್ಕೆ ತಲುಪಿ ಮಹಜರು ನಡೆಸಿದರು. ಮೃತರು ತಾಯಿ ಕೆ. ಮಾದವಿ, ಪತ್ನಿ ಮಿನಿ, ಮಕ್ಕಳಾದ ಕಿರಣ್‌ರಾಜ್, ಕೀರ್ತನ, ಸಹೋದರ ರಾದ ಬಾಬು, ಸಜೀವನ್, ರತೀಶ್, ಸಹೋದರಿ ಕೆ. ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page