ಯುವಕರೊಳಗೆ  ಹೊಡೆದಾಟ: ಇಬ್ಬರ ಸೆರೆ

ಕುಂಬಳೆ: ಸೂರಂಬೈಲು ಬಸ್ ತಂಗುದಾಣ ಸಮೀಪ ಇಂದು ಮುಂಜಾನೆ ಹೊಡೆದಾಡುತ್ತಿದ್ದ ಇಬ್ಬರನ್ನು ಕುಂಬಳೆ ಎಸ್.ಐ. ವಿ.ಕೆ. ಅನೀಶ್ ಸೆರೆ ಹಿಡಿದಿದ್ದಾರೆ. ಸೂರಂಬೈಲು ನಿವಾಸಿಗಳಾದ ಕೃತಿಕ್ (೨೫), ಸುದೀಪ್ (೨೩) ಎಂಬಿವರು ಬಂಧಿತ ವ್ಯಕ್ತಿಗಳು. ಮುಂಜಾನೆ ೧.೩೦ರ ವೇಳೆ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದು ಈ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದನ್ನು ಕಂಡ ಎಸ್.ಐ. ಇಬ್ಬರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page