ಯುವಕ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ಯುವಕನೋರ್ವ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಕುಂಬಳೆ ಮಾವಿನಕಟ್ಟೆಯ ಹರೀಶ್ ಗಟ್ಟಿಯವರ ಪುತ್ರ ನಿತಿನ್ ಕುಮಾರ್ ಗಟ್ಟಿ (25) ಮೃತಪಟ್ಟ ವ್ಯಕ್ತಿ. ಇವರು ಲೈಟಿಂಗ್ಸ್ ನೌಕರನಾಗಿ ದ್ದರು. ನಿನ್ನೆ ರಾತ್ರಿ 11 ಗಂಟೆ ವೇಳೆ ಮನೆಗೆ ತಲುಪಿದ ಇವರು ಊಟಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಏಳದ ಹಿನ್ನೆಲೆಯಲ್ಲಿ ಮನೆಯ ವರು ಕೊಠಡಿಯ ಬಾಗಿಲು ತೆರೆದು ನೋಡಿದಾಗ ನಿತಿನ್ ಕುಮಾರ್ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ತಂದೆ, ತಾಯಿ ಸಾವಿತ್ರಿ, ಸಹೋದರಿಯರಾದ ಅನುಷ, ಅಂಜುಷ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.