ಯುವತಿಗೆ ದೌರ್ಜನ್ಯ: ನಟ ಶಿಯಾಸ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಚಂದೇರ ಪೊಲೀಸರು
ಹೊಸದುರ್ಗ: ಪಡನ್ನ ನಿವಾಸಿಯಾದ ೩೨ರ ಹರೆಯದ ಯುವತಿಯ ಮಾನಭಂಗ ಪ್ರಕರಣದಲ್ಲಿ ಚೆನ್ನೈಯಲ್ಲಿ ಸೆರೆಯಾದ ಆರೋಪಿ ನಟ ಶಿಯಾಸ್ ಕರೀಂನನ್ನು ಚಂದೇರ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಇಂದು ಬೆಳಿಗ್ಗೆ ೬.೩೦ಕ್ಕೆ ಚಂದೇರ ಠಾಣೆಗೆ ಈತನನ್ನು ಕರೆತರಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖಾ ತಂಡದಲ್ಲಿನ ಇನ್‌ಸ್ಪೆಕ್ಟರ್ ಸಿ.ಪಿ. ಮನುರಾಜ್ ತಂಡ ಈತನನ್ನು ಚೆನ್ನೈಯಿಂದ ಕರೆದುಕೊಂಡು ಬಂದಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಲುಕೌಟ್ ನೋಟೀಸ್ ಇದ್ದಕಾರಣ ಕೊಲ್ಲಿ ಯಿಂದ ತಲುಪಿದ ನಟ ಶಿಯಾಸ್ ನನ್ನು ಎಮಿಗ್ರೇಶನ್ ಅಧಿಕಾರಿಗಳು ತಡೆದು ನಿಲ್ಲಿಸಿದ್ದರು. ಬಳಿಕ ಚಂದೇರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಚೆನ್ನೈಗೆ ತಲುಪಿದ ಚಂದೇರ ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದಿದ್ದರು. ನಿನ್ನೆ ರಾತ್ರಿ ೧೧ ಗಂಟೆಗೆ ಅಲ್ಲಿಂದ ಪೊಲೀಸ್ ತಂಡ ಊರಿಗೆ ಹಿಂತಿರುಗಿತ್ತು.ವಿವಾಹ ಭರವಸೆ ನೀಡಿ ದೌರ್ಜ ನ್ಯಗೈದ ಬಗ್ಗೆ ಹಾಗೂ ಎರ್ನಾಕುಳಂನ ಜಿಮ್‌ನಲ್ಲಿ ಪಾಲುದಾರಳನ್ನಾಗಿ ಮಾಡುವುದಾಗಿ ತಿಳಿಸಿ ೧೧ ಲಕ್ಷ ರೂ., ಅಪಹರಿಸಿರುವ ಬಗ್ಗೆ ಯುವತಿ ದೂರಿದ್ದಳು. ಜಾಹೀರಾತಿನಲ್ಲಿ ನಟಿಸುತ್ತಿದ್ದ ಶಿಯಾಸ್ ಬಿಗ್ ಬಾಸ್ ಶೋದ ಬಳಿಕ ಖ್ಯಾತನಾಗಿದ್ದನು.