ಯುವತಿಗೆ ಹಲ್ಲೆ: ಸಹೋದರ ಸಹಿತ ಮೂವರ ವಿರುದ್ಧ ಕೇಸು
ಕುಂಬಳೆ: ಸಹೋದರ ಸಹಿತ ಮೂರು ಮಂದಿ ಸೇರಿ ಮರದ ಬೆತ್ತದಿಂದ ಹಲ್ಲೆಗೈದ ರೆಂದು ಆರೋಪಿಸಿ ಯುವತಿ ನೀಡಿದ ದೂರಿನಂತೆ ನ್ಯಾಯಾಲಯದ ನಿರ್ದೇಶ ಮೇರೆಗೆ ಮೂರು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬಂಬ್ರಾಣ ನಿವಾಸಿ ಮೂಸ ಎಂಬವರ ಪತ್ನಿ ಸುಹರಾ ನೀಡಿದ ದೂರಿನಂತೆ ಸುಹರಾರ ಸಹೋದರ ಬಂಬ್ರಾಣದ ಆಬಿದ್, ಆಬಿದ್ರ ಕೆಲಸದಾಳುಗಳಾದ ಖಾಲಿದ್ ಹಾಗೂ ಇಕ್ಭಾಲ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಒಂದು ವಾರದ ಹಿಂದೆ ಹಲ್ಲೆ ಘಟನೆ ನಡೆದಿತ್ತು. ಈ ಬಗ್ಗೆ ಸುಹರಾ ಕಾಸರಗೋಡು ಜೆಎಫ್ಸಿಎಂ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಈ ಬಗ್ಗೆ ನ್ಯಾಯಾಲಯ ನೀಡಿದ ನಿರ್ದೇಶದಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ.