ಯುವತಿಯ ಚಿತ್ರ ಮೋರ್ಫ್‌ಗೊಳಿಸಿ ಫೇಸ್‌ಬುಕ್‌ನಲ್ಲಿ ಪ್ರಚಾರ
ಕಾಸರಗೋಡು: ಯುವ ತಿಯ ಚಿತ್ರವನ್ನು ಮೋರ್ಫ್ ಮಾಡಿ ಫೇಸ್‌ಬುಕ್‌ನಲ್ಲಿ ಪ್ರಚಾg ಗೈದುದಾಗಿ ದೂರಲಾಗಿದೆ. 36ರ ಹರೆಯದ ಯುವತಿ ನೀಡಿದ ದೂರಿನಂತೆ ಚಿತ್ತಾರಿಕಲ್ ಪೊಲೀ ಸರು ಕೇಸು ದಾಖಲಿಸಿಕೊಂಡಿ ದ್ದಾರೆ. 2025 ಜೂನ್ 4ರಿಂದ 20ರವರೆಗಿನ ದಿನಗಳಲ್ಲಿ ಯುವ ತಿಯ ನಕಲಿ ಪ್ರೊಫೈಲ್ ತಯಾ ರಿಸಿರುವುದಾಗಿ ದೂರಲಾಗಿದೆ. ಯುವತಿಯ ಫೊಟೋವನ್ನು ಮೋರ್ಫ್‌ಗೊಳಿಸಿ ಫೇಸ್ ಬುಕ್‌ನ ವಿವಿಧ ಗ್ರೂಪ್‌ಗಳಲ್ಲಿ ಹಂಚಿಕೊಂಡಿರುವುದಾಗಿ ತಿಳಿಸ ಲಾಗಿದೆ. ಯುವತಿಗೆ ಮಾನಹಾನಿ ಉಂಟುಮಾಡಲು ಉದ್ದೇಶ ಪೂರ್ವಕ ಈ ಕೃತ್ಯ ನಡೆಸಿರುವು ದಾಗಿ ದೂರಲಾಗಿದೆ. ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಆರಂಭಿಸಿದ್ದಾರೆ.