ಯುವತಿಯ ಮೃತದೇಹ ಬಾವಿಯಲ್ಲಿ ಪತ್ತೆ
ಕಾಸರಗೋಡು: ಮನೆ ಪಕ್ಕದ ಬಾವಿಯಲ್ಲಿ ಯುವತಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕೂಡ್ಲು ಪೆರ್ನಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ಲಕ್ಷ್ಮೀಕಾಂತ ಎಂಬವರ ಪತ್ನಿ ಸಹನ ಕುಮಾರಿ (35) ಸಾವನ್ನಪ್ಪಿದ ಯುವತಿ. ನವೆಂಬರ್ 30ರಂದು ರಾತ್ರಿ ಸಹನ ಕುಮಾರಿ ಮನೆಯಿಂದ ಹೊರ ಹೋಗಿದ್ದರು. ಬಳಿಕ ಮರಳಲಿಲ್ಲ. ಮನೆಯವರು ಅವರಿಗಾಗಿ ಹುಡುಕಾಟ ನಡೆಸಿದಾಗ ಸಹನಕುಮಾರಿಯವರ ಮೃತದೇಹ ಮನೆ ಪಕ್ಕದ ಬಾವಿಯಲ್ಲಿ ನಿನ್ನೆ ಬೆಳಿಗ್ಗೆ ಪತ್ತೆಯಾಗಿದೆ. ಮೃತದೇಹ ವನ್ನು ಬಾವಿಯಿಂದ ಮೇಲಕ್ಕೆತ್ತಿದ ಬಳಿಕ ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಕಾಸರಗೋ ಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.