ಯುವತಿ ನಾಪತ್ತೆ: ದೂರು

ಕಾಸರಗೋಡು: ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಇರಿಯ ಎಂಬಲ್ಲಿನ 18ರ ಹರೆಯದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಇರಿಯ ಚೆರಿಪ್ಪೋಡಲ್ ಹೌಸ್‌ನ ಆರ್ಯ ಎಂಬಾಕೆ  ನಿನ್ನೆ ರಾತ್ರಿ 7 ಗಂಟೆಗೆ ಮನೆಯಿಂದ  ನಾಪತ್ತೆಯಾಗಿದ್ದಾಳೆ. ಮನೆಯವರು ನೀಡಿದ ದೂರಿನಂತೆ ಅಂಬಲತ್ತರ ಪೊಲೀಸರು ನಡೆಸಿದ ತನಿಖೆ ವೇಳೆ ಯುವತಿಯನ್ನು ಮಲಪ್ಪುರ ನಿವಾಸಿಯಾದ ಯುವಕನೊಂದಿಗೆ ಪತ್ತೆಹಚ್ಚಿರುವುದಾಗಿ ತಿಳಿದು ಬಂದಿದೆ. ಯುವತಿ ಎರ್ನಾಕುಳಂನಲ್ಲಿ ಕಲಿಯುತ್ತಿದ್ದ ವೇಳೆ ಟ್ಯಾಕ್ಸಿ ಚಾಲಕನಾಗಿದ್ದ ಯುವಕನೊಂದಿಗೆ ಸ್ನೇಹದಲ್ಲಿದ್ದಳೆನ್ನಲಾಗಿದೆ.

You cannot copy contents of this page