ಯುವತಿ ನಾಪತ್ತೆ
ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಯ್ಯಾರು ಕುಡಾಲುಮೇರ್ಕಳ ರಾಬಿಯಾ ಮಂಜಿಲ್‌ನ ಫಾತಿಮತ್ ರಮ್ಲಾ (29) ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮನೆಯವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸುದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ನಿನ್ನೆ ಸಂಜೆ 3 ಗಂಟೆ ಬಳಿಕ ರಮ್ಲಾ ನಾಪತ್ತೆಯಾಗಿ ರುವುದಾಗಿ ತಿಳಿಸಲಾಗಿದೆ. ಫಾತಿಮತ್ ರಮ್ಲಾರ ಕುರಿತು ಮಾಹಿತಿ ಲಭಿಸಿದವರು 94979 80924, 9497987218 ಎಂಬ ನಂಬ್ರಗಳಲ್ಲಿ ತಿಳಿಸಬೇಕಾಗಿ ಪೊಲೀಸರು ವಿನಂತಿಸಿದ್ದಾರೆ.