ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಹದಿನೇಳರ ಹರೆಯದ ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.ಉಳಿಯತ್ತಡ್ಕ ರೆಹಮ್ಮತ್ ನಗರದ ಶಿಹಾಬ್ ಎಂಬವರ ಪುತ್ರಿ ಜಂಶೀರಾ (17) ಸಾವನ್ನಪ್ಪಿದ ಯುವತಿ. ನಿನ್ನೆ ಸಂಜೆ ಆಕೆ ಮನೆ ಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅದನ್ನು ಕಂಡ ಮನೆಯವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರ ಣೋತ್ತರ ಪರೀಕ್ಷೆಗಾಗಿ ಸಾಗಿಸಲಾಯಿತು. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿ ಸಿದ್ದಾರೆ. ಮೃತಳು ತಂದೆಯ ಹೊರ ತಾಗಿ ತಾಯಿ ಆಯಿಷಾ, ಸಹೋ ದರ ಸಹೋದರಿಯರಾದ ಅಪ್ಸಲ್, ಶಮ್ನಾದ್, ಸಂಶೀರ್, ಜಾಶಿರರನ್ನು ಅಗಲಿದ್ದಾಳೆ.