ಯುವತಿ ಪ್ರಿಯತಮನೊಂದಿಗೆ ಪರಾರಿ
ಪೆರ್ಲ: ಪೆರ್ಲದ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಪ್ರಿಯತಮನೊಂದಿಗೆ ಪರಾರಿಯಾಗಿದ್ದಾಳೆ. ಶೇಣಿ ನಿವಾಸಿಯಾದ ೨೧ರ ಹರೆಯದ ಯುವತಿ ಪೆರ್ಲದ ಅಂಗಡಿಯೊಂ ದರ ನೌಕರನಾದ ೨೮ರ ಹರೆಯದ ಯುವಕನೊಂದಿಗೆ ಪರಾರಿಯಾಗಿ ದ್ದಾಳೆ. ಈ ಇಬ್ಬರು ದೀರ್ಘಕಾಲ ದಿಂದ ಪ್ರೇಮದಲ್ಲಿದ್ದರೆಂದು ಹೇಳಲಾಗುತ್ತಿದೆ. ಯುವತಿ ನಿನ್ನೆ ನಾಪತ್ತೆಯಾಗಿದ್ದು, ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.