ಯುವಮೋರ್ಛಾ ನೇತಾರ, ತಂದೆಯ ನಿಗೂಢ ಸಾವು: ಕ್ರಿಯಾ ಸಮಿತಿ ಪದಾಧಿಕಾರಿಗಳಿಂದ ಹೇಳಿಕೆ ದಾಖಲಿಸಿದ

ಪೊಲೀಸ್: ಆರೋಪಕ್ಕೆಡೆಯಾದವರು ನಾಪತ್ತೆ

ಕುಂಬಳೆ: ಯುವಮೋರ್ಛಾ ನೇತಾರ ಹಾಗೂ ತಂದೆಯ ನಿಗೂಢ ಸಾವಿಗೆ ಸಂಬಂಧಿಸಿ ಲಭಿಸಿದ ದೂರಿನ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಇದರಂಗವಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಚೆಯರ್‌ಮೆನ್ ಪ್ರದೀಪ್ ಆರಿಕ್ಕಾಡಿ, ಕನ್ವೀನರ್ ಮೋಹನ್ ಬಂಬ್ರಾಣ ಎಂಬಿವರಿಂದ ಕುಂಬಳ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ.

ಬಂಬ್ರಾಣ ಕಲ್ಕುಳದ  ಮೂಸ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಯುವಮೋರ್ಛಾ ಕುಂಬಳೆ ಮಂಡಲ ಕಮಿಟಿ ಉಪಾಧ್ಯಕ್ಷರಾಗಿದ್ದ ರಾಜೇಶ್ (೩೦) ಕಳೆದ ತಿಂಗಳ ೧೦ರಂದು ನಾಪತ್ತೆಯಾಗಿ ಬಳಿಕ ಉಳ್ಳಾಲ ಬಂಗರ ಸಮುದ್ರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದರಲ್ಲಿ ನಿಗೂಢತೆಗಳಿವೆಯೆಂದು ಈ ಇಬ್ಬರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಮಗ್ರ ತನಿಖೆ ನಡೆಸಿ ನಿಗೂಢತೆಗಳನ್ನು ಪತ್ತೆಹಚ್ಚಬೇಕೆಂದು ಅವರು ಪೊಲೀಸರಲ್ಲಿ ಆಗ್ರಹಪಟ್ಟಿದ್ದಾರೆ.

ರಾಜೇಶ್‌ರ ಸಾವಿನಲ್ಲಿ ನಿಗೂಢತೆಗಳಿವೆಯೆಂದೂ ಈ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ರಾಜೇಶ್‌ರ ತಂದೆ ಲೋಕನಾಥರ ಸಾವಿನಲ್ಲೂ ಸಂಶಯಗಳಿವೆಯೆಂದೂ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಲೋಕನಾಥ ಸಮುದ್ರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಉಳ್ಳಾಲ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಲೋಕನಾಥರ ಪತ್ನಿ ಪ್ರಭಾವತಿ (೪೯), ಪುತ್ರ ಶುಭಂ (೨೫), ಪ್ರಭಾವತಿಯ ಸಹೋದರಿ ಬಂಟ್ವಾಳ ಮೊಂಟೆಪದವು ನರಿಂಗಾನದ ಬೇಬಿ ಯಾನೆ ಭಾರತಿ (೩೮), ಆರಿಕ್ಕಾಡಿ ಪಳ್ಳದ ಸಂದೀಪ್ (೩೭) ಎಂಬಿವರ ವಿರುದ್ಧ ತನಿಖೆ ನಡೆಯುತ್ತಿದೆ.

ರಾಜೇಶ್ ಮೃತಪಟ್ಟ ಬೆನ್ನಲ್ಲೇ ಆರೋಪಕ್ಕೆಡೆಯಾದ ಪ್ರಭಾವತಿ ಹಾಗೂ ಪುತ್ರ ಕ್ವಾರ್ಟರ್ಸ್‌ಗೆ ಬೀಗ ಜಡಿದು ತಲೆ ಮರೆಸಿಕೊಂ ಡಿರು ವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪುತ್ರ ಸಾವಿಗೀಡಾದ ಬೆನ್ನಲ್ಲೇ ಲೋಕನಾಥರಿಗೆ ಕ್ವಾರ್ಟರ್ಸ್‌ನ ಕೀಲಿಕೈ ನೀಡದೆ ಅವರು ತಲೆಮರೆಸಿಕೊಂಡಿದ್ದು, ಇದನ್ನು  ಸಂಶಯ ಹಾಗೂ ನಿಗೂಢತೆಗಳಿವೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.

You cannot copy contents of this page