ಯೂತ್ ಕಾಂಗ್ರೆಸ್ ಕಾರ್ಯಕರ್ತರ ಅವಳಿ ಕೊಲೆ ಪ್ರಕರಣ: ಶಿಕ್ಷೆ ಪ್ರಮಾಣ ಘೋಷಣೆ ನಾಳೆ: ಬಿಗಿ ಭದ್ರತೆ
ಕಾಸರಗೋಡು: ಇಡೀ ರಾಜ್ಯವನ್ನೇ ನಡುಗಿಸಿದ ಪೆರಿಯಾ ಕಲ್ಯೋಟ್ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ (19) ಮತ್ತು ಶರತ್ಲಾಲ್ (24) ಎಂಬವರನ್ನು 2019 ಫೆಬ್ರವರಿ 17ರಂದು ರಾತ್ರಿ ಬೈಕ್ನಲ್ಲಿ ಸಂಚರಿಸುತ್ತಿದ್ದ ವೇಳ ಪೆರಿಯಾ ಕಲ್ಯೋಟ್ನಲ್ಲಿ ಕಡಿದು ಬರ್ಭರ ವಾಗಿ ಕೊಲೆಗೈದ ಪ್ರಕರಣದಲ್ಲ್ಲಿ 14 ಮಂದಿ ಆರೋಪಿಗಳ ಶಿಕ್ಷಾ ಪ್ರಮಾಣ ವನ್ನು ಕೊಚ್ಚಿ ಸಿಬಿಐ ವಿಶೇಷ ನ್ಯಾಯಾಲಯ ನಾಳೆ ಘೋಷಿಸಲಿದೆ.
ಈ ಪ್ರಕರಣದಲ್ಲಿ ಒಟ್ಟು 24 ಮಂದಿ ಆರೋಪಿಗಳಿದ್ದು, ಅದರಲ್ಲಿ 14 ಮಂದಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಇತರ 10 ಮಂದಿಯ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತು ಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ತಪ್ಪಿತಸ್ಥರೆಂದು ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಹೆಸರಿಸಲಾಗಿರುವ ಆರೋಪಿಗಳು ಹಾಗೂ ಪೆರಿಯಾ ನಿವಾಸಿಗಳಾದ ಎ. ಪೀತಾಂಭರನ್ (51), ಸಜಿ ಸಿ. ಜೋರ್ಜ್ (46), ಕೆ.ಎಂ. ಸುರೇಶ್ (33), ಕೆ. ಅನಿಲ್ ಕುಮಾರ್ (41), ಗಿಜಿನ್ (32), ಆರ್. ಪ್ರಶಾಂತ್ (28), ಎ. ಅಶ್ವಿನ್ (ಅಪ್ಪು 24), ಸುಭೀಷ್ (ಮಣಿ-35), ಟಿ. ರಂಜಿತ್ (ಅಪ್ಪು-52) ಮತ್ತು ಎ. ಸುರೇಂದ್ರನ್ (ವಿಷ್ಣುಸುರ 53) ಎಂಬವರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.
ಉಳಿದಂತೆ ಆರೋಪಿಯನ್ನು ಪೊಲೀಸ್ ಕಸ್ಟಡಿಯಿಂದ ಬಿಡಿಸಿ ಸಾಗಿಸಿದ ಆರೋಪದಂತೆ ಕೆ. ಮಣಿಕಂಠನ್ (44), ಮಾಜಿ ಶಾಸಕ ಕೆ.ವಿ. ಕುಂuಟಿಜeಜಿiಟಿeಜರಾಮನ್ (61), ರಾಘವನ್ ವೆಳುತ್ತೋಳಿ (57) ಮತ್ತು ಕೆ.ವಿ. ಭಾಸ್ಕರನ್ (68) ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇವರ ಮೇಲಿನ ಆರೋಪಗಳು ವಿಚಾರಣೆಯಲ್ಲಿ ಸಾಬೀತುಗೊಂಡಿದ್ದು, ಅದರಿಂದ ಅವರು ಕೂಡಾ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ.
ಮೊದಲು ಬೇಕಲ ಪೊಲೀಸರು ಈ ಕೊಲೆ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸ ಲಾಗಿತ್ತು. ಆ ಬಳಿಕ ನ್ಯಾಯಾಲಯ ನೀಡಿದ ನಿರ್ದೇಶದಂತೆ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು.
ಶಿಕ್ಷಾ ಪ್ರಮಾಣ ನಾಳೆ ಘೋಷಿಸಲ್ಪಡುವ ಹಿನ್ನೆಲೆಯಲ್ಲಿ ಪೆರಿಯ ಮತ್ತು ಪರಿಸರ ಪ್ರದೇಶಗಳಲ್ಲಿ ಇಂದಿನಿAದಲೇ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಎಲ್ಲೆಡೆ ತೀವ್ರ ನಿಗಾ ಇರಿಸಿದ್ದಾರೆ. ಶಾಂತಿ ಪಾಲನೆಗಾಗಿ ಜಿಲ್ಲಾಧಿಕಾರಿ ನಿನ್ನೆ ಸರ್ವಪಕ್ಷ ಸಭೆ ಕರೆದಿದ್ದರು.