ಯೆಮನ್ ಜೈಲಿನಲ್ಲಿರುವ ನಿಮಿಷಪ್ರಿಯರ ಗಲ್ಲುಶಿಕ್ಷೆ ರದ್ದುಗೊಳಿಸಲು ಒಪ್ಪಂದ: ಶಿಕ್ಷೆ ಕೂಡಲೇ ಜ್ಯಾರಿಗೊಳಿಸಬೇಕೆಂದು ತಲಾಲ್ ಕುಟುಂಬ ಆಗ್ರಹ
ಕಲ್ಲಿಕೋಟೆ: ಯೆಮನ್‌ನ ಜೈಲಿನಲ್ಲಿ ರುವ ಕೇರಳೀಯ ದಾದಿ ನಿಮಿಷಪ್ರಿಯ ಎಂಬಾಕೆಯ ಗಲ್ಲುಶಿಕ್ಷೆಯನ್ನು ರದ್ದುಗೊ ಳಿಸಲು ಸಾಧ್ಯತೆ ಇದೆಯೆಂದು ಚರ್ಚೆ ಯಲ್ಲಿ ಭಾಗವಹಿಸಿದ ಯೆಮನ್ ಪಂಡಿ ತರು ತಿಳಿಸಿರುವುದಾಗಿ ಕಾಂತಾಪುರಂರ ಕಚೇರಿ ಮೂಲಗಳು ತಿಳಿಸಿವೆ. ಇದೇ ವೇಳೆ ಕ್ಷಮಾಧನದ ವಿಷಯದಲ್ಲಿ ಅಂತಿಮ ನಿರ್ಧಾರವುಂಟಾಗಿಲ್ಲ. ಆದರೆ ಕ್ಷಮೆ ನೀಡುವ ಬಗ್ಗೆ ಚರ್ಚೆಯಲ್ಲಿ ಒಪ್ಪಂದವಾಗಿ ರುವುದಾಗಿ ಹೇಳ ಲಾಗುತ್ತಿದೆ. ಅಂತಿಮ ನಿರ್ಧಾರ ಇನ್ನು ಕೆಲವೇ ಗಂಟೆಗ ಳೊಳಗೆ ಉಂಟಾಗಲಿದೆಯೆಂದೂ ಪಂಡಿತರು ತಿಳಿಸಿರುವುದಾಗಿ ಕಾಂತಾಪುರಂರ ಕಚೇರಿ ಮೂಲಗಳು ತಿಳಿಸಿವೆ. ನಿಮಿಷಪ್ರಿಯರ ಗಲ್ಲುಶಿಕ್ಷೆ ರದ್ದುಗೊಳಿಸಲಾಗುವುದು ಎಂಬ ವರದಿಗಳ ಬೆನ್ನಲ್ಲೇ ಮತ್ತೆ ಸಂಶ ಯಗಳು ಹುಟ್ಟಿಕೊಂಡಿವೆ. ಶಿಕ್ಷೆಯನ್ನು ಶೀಘ್ರದಲ್ಲೇ ಜ್ಯಾರಿಗೊಳಿಸಬೇಕೆಂದು ತಲಾಲ್‌ರ ಕುಟುಂಬ ಆಗ್ರಹಪಟ್ಟಿ ರುವುದಾಗಿ ಹೇಳಲಾಗುತ್ತಿದೆ. ಗಲ್ಲುಶಿಕ್ಷೆಗೆ ಹೊಸ ದಿನಾಂಕವನ್ನು ನಿರ್ಧರಿಸಬೇ ಕೆಂದೂ ಕುಟುಂಬ ವಿನಂತಿಸಿದೆ. ಈ ಬಗ್ಗೆ ತಿಳಿಸಿ ಅಟಾರ್ನಿ ಜನರಲ್‌ಗೆ ಪತ್ರ ಬರೆಯಲಾಗಿದೆ. ಇದೇ ವೇಳೆ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಲಾಗಿದೆಯೆಂಬ ವಿಷಯವನ್ನು ಕೇಂದ್ರ ಖಚಿತಪಡಿಸಿಲ್ಲ. ಕೇರಳದಿಂದ ತೆರಳಿದ ಮಧ್ಯಸ್ಥಿಕೆ ತಂಡದ ಸಹಿತ ಚರ್ಚೆಯ ಫಲವಾಗಿ ನಿಮಿಷಪ್ರಿಯರ ಗಲ್ಲುಶಿಕ್ಷೆಯನ್ನು ಮುಂದೂಡಲಾಗಿದೆ. ಆದರೆ ಮುಂ ದೂಡಿದ ದಿನಾಂಕವನ್ನು ತಿಳಿಸಿಲ್ಲ.