ರಂಬೂಟನ್ ಗಂಟಲಲ್ಲಿ ಸಿಲುಕಿ ಮಗು ಮೃತ್ಯು

ಕೊಚ್ಚಿ: ಪೆರುಂಬಾವೂರ್‌ನಲ್ಲಿ ರಂಬೂಟನ್ ಹಣ್ಣು ಗಂಟಲಲ್ಲಿ ಸಿಲುಕಿ ಒಂದು ವರ್ಷದ ಮಗು ದಾರುಣವಾಗಿ ಮೃತಪಟ್ಟಿದೆ. ಮರುದಕವಲದಲ್ಲಿ ಬಾಡಿಗೆಗೆ ವಾಸಿಸುವ ಇಡುಕ್ಕಿ ನಿವಾಸಿ ಆದಿರಾಳ ಪುತ್ರ ಅವ್ಯುಕ್ತ್ ಮೃತಪಟ್ಟ ಮಗು. ನಿನ್ನೆ ಸಂಜೆ 6 ಗಂಟೆಗೆ ಧಾರುಣ ಘಟನೆ ನಡೆದಿದೆ. ಅಜ್ಜಿಯ ಜೊತೆ ಆಟವಾಡಿಕೊಂಡಿದ್ದ ಮಗು ಸಿಕ್ಕಿದ ರಂಬೂಟನ್ ಹಣ್ಣನ್ನು ನುಂಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಪೆರುಂಬಾವೂರಿನ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

RELATED NEWS

You cannot copy contents of this page