ರಕ್ತಸ್ರಾವದಿಂದ ಅಸ್ವಸ್ಥಗೊಂಡು ಯುವತಿ ಮೃತ್ಯು
ಮುಳ್ಳೇರಿಯ: ಯುವತಿ ಯೋರ್ವೆ ಅಪರಿಮಿತ ರಕ್ತಸ್ರಾವ ದಿಂದ ಅಸ್ವಸ್ಥಗೊಂಡು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮವ್ವಾರು ಬಳಿಯ ಮಲ್ಲಮೂಲೆ ನಿವಾಸಿ ಸಂತೋಷ್ ಎಂಬವರ ಪತ್ನಿ ಸುಮಿತ್ರ (35)ಮೃತಪಟ್ಟ ಯುವತಿ. ಇಂದು ಬೆಳಿಗ್ಗೆ ಇವರಿಗೆ ರಕ್ತಸ್ರಾವ ಉಂಟಾಗಿತ್ತೆನ್ನಲಾಗಿದೆ. ಇದರಿಂದ ಕೂಡಲೇ ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದ್ದು, ಆದರೂ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸg ಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ನೀರ್ಚಾಲು ಬಳಿಯ ಬಡಗಮೂಲೆ ನಿವಾಸಿ ದಿ| ಕೃಷ್ಣ ಮಣಿಯಾಣಿ ಎಂಬವರ ಪುತ್ರಿಯಾದ ಸುಮಿತ್ರ ತಾಯಿ ಕುಸುಮಾವತಿ, ಪತಿ, ಮಕ್ಕಳಾದ ಧನುಷ್, ಆದರ್ಶ್, ಅಖಿಲೇಶ್, ಆದಿರ, ಸಹೋದರಿ ಶುಭ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.