ರಕ್ಷಿತಾರಣ್ಯದಿಂದ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಹಲವೆಡೆಗಳ ರಕ್ಷಿತಾರಣ್ಯಗಳಿಂದ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿದ ಪ್ರಕರಣಗಳ ಆರೋಪಿ ಯನ್ನು ಅರಣ್ಯ ಅಧಿಕಾರಿಗಳ ತಂಡ ಬಂಧಿಸಿದೆ.

ಕುಂಡಂಕುಳಿ ಕಾರಕಡವು ಕೆ. ಮೊಹಮ್ಮದ್ ಕುಂಞಿ (45) ಬಂಧಿತ ಆರೋಪಿ. ಜೂನ್ 20ರಂದು ಪಾಂಡಿ ಅರ್ತ್ಯ ಸರಕಾರಿ ರಕ್ಷಿತಾರಣ್ಯಕ್ಕೆ ಹಾಡಹಗಲೇ ನುಗ್ಗಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಲೆತ್ನಿಸಿದ  ಆರೋಪದಂತೆ ಅರಣ್ಯಪಾಲರರು ಈತನನ್ನು ಬಂಧಿಸಿದ್ದಾರೆ.

 ಮಾತ್ರವಲ್ಲ ಕಡಿದು ಸಾಗಿಸಲೆತ್ನಿಸಿದ ಶ್ರೀಗಂಧದ ಕೊರಡುಗಳು, ಮರ ಕಡಿಯಲು ಬಳಸಲಾದ ಆಯುಧ ಸಾಮಗ್ರಿಗಳನ್ನು ಅರಣ್ಯಪಾಲಕರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅರಣ್ಯ ಪಾಲಕರನ್ನು ಕಂಡಾಕ್ಷಣ ಆರೋಪಿ ಅಲ್ಲಿಂದ ಪರಾರಿಯಾಗಿದ್ದನು. ಆ ವೇಳ ಭಾರೀ ಮಳೆ ಸುರಿಯುತ್ತಿತ್ತು. ಅದರಿಂದಾಗಿ ಆತನನ್ನು ಬೆನ್ನಟ್ಟಲು  ಅರಣ್ಯ ಪಾಲಕರು  ತಯಾರಾಗಲಿಲ್ಲ.  ಬಳಿಕ ನಡೆಸಿದ ತನಿಖೆಯಲ್ಲಿ ಆತನನ್ನು ಬಂಧಿಸಲಾಯಿತು.

ಕಾಸರಗೋಡು ಅರಣ್ಯ ರೇಂಜ್‌ನಲ್ಲಿ ಮಾತ್ರವಾಗಿ  ಈತನ ವಿರುದ್ಧ ಆರು ಕೇಸುಗಳು ಮತ್ತು ಕಣ್ಣೂರು ಜಿಲ್ಲೆಯಲ್ಲೂ ಈತನ ವಿರುದ್ಧ ಕೇಸುಗಳಿವೆಯೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಸೆಕ್ಷನ್ ಪೋರೆಸ್ಟ್ ಆಫೀಸರ್ ಎಂ.ಎ. ರಾಜು, ಬೀಟ್ ಆಫೀಸರ್‌ಗಳಾದ ಸಿ. ರಾಜೇಶ್, ಕೆ. ಶಿವಕೀರ್ತಿ, ಕೆ. ಸುಧೀಶ್ ಕುಮಾರ್, ವಿ.ಕೆ.ಬೀನೀಶ್  ಮತ್ತು ಎನ್. ಅಭಿಲಾಷ್ ಎಂಬಿವರು  ಆರೋಪಿ ಯನ್ನು ಬಂಧಿಸಿದ ತಂಡದಲ್ಲಿ ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page