ರಜಾ ದಿನದಂದು 13ರ ಬಾಲಕಿ, ಯುವಕ ಶಾಲಾ ಪರಿಸರದಲ್ಲಿ ಪತ್ತೆ: ನಾಗರಿಕರನ್ನು ಕಂಡು ಓಡಿಹೋದ ಯುವಕನ ವಿರುದ್ಧ ಪೋಕ್ಸೋ ಕೇಸು
ಮಂಜೇಶ್ವರ: ರಜಾ ದಿನದಂದು ಹದಿಮೂರರ ಹರೆಯದ ಶಾಲಾ ವಿದ್ಯಾರ್ಥಿನಿ ಯನ್ನು ಶಾಲಾ ಪರಿಸರಕ್ಕೆ ಬರಮಾಡಿಕೊಂಡು ಆಕೆಗೆ ಕಿರುಕುಳ ನೀಡಲು ಯತ್ನಿಸಿರು ವುದಾಗಿ ದೂರಲಾಗಿದೆ.
ಘಟನೆಗೆ ಸಂಬಂಧಿಸಿ ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಪರಿಸರದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಎಂಟನೇ ತರಗತಿ ವಿದ್ಯಾರ್ಥಿನಿಯಾದ ಹದಿಮೂರರ ಹರೆಯದ ಬಾಲಕಿ ಹಾಗೂ ೨೦ರ ಹರೆಯದ ಯುವಕನನ್ನು ಸ್ಥಳೀಯರು ಶಾಲಾ ಪರಿಸರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡಿರುವುದಾಗಿ ಹೇಳಲಾಗುತ್ತಿದೆ. ವಿಷಯ ತಿಳಿದು ನಾಗರಿಕರು ಅಲ್ಲಿಗೆ ತಲುಪಿದಾಗ ಯುವಕ ಓಡಿ ಪರಾರಿಯಾಗಿದ್ದನು. ಅನಂತರ ಬಾಲಕಿಯನ್ನು ವಿಚಾರಿಸಿದಾಗ ಆಕೆಗೆ ಯುವಕ ಶಾರೀರಿಕವಾಗಿ ಕಿರುಕುಳ ನೀಡಿದ ವಿಷಯ ತಿಳಿದುಬಂದಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈ ಬಗ್ಗೆ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.