ರಣಜಿ ಟ್ರೋಫಿ ಇತಿಹಾಸದಲ್ಲೇ ಮೊದಲಬಾರಿ ಫೈನಲ್‌ಗೇರಿದ ಕೇರಳ
ಅಹಮ್ಮದಾಬಾದ್: ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೇರಳ ಫೈನಲ್‌ಗೇರಿದೆ.
ಫೆ. 26ರಂದು ನಾಗ್ಪುರದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ವಿದರ್ಭ ತಂಡವನ್ನು ಕೇರಳ ತಂಡ ಎದುರಿಸಲಿದೆ. ಸೆಮಿ ಫೈನಲ್‌ನಲ್‌ನಲ್ಲಿ ಮೊದಲು ಆಡಿದ ತನ್ನ ತಂಡದ ಅಗ್ರಗಣ್ಯ ಬ್ಯಾಟರ್ ಗಳಲ್ಲೋರ್ವ ನಾದ ಕಾಸರಗೋಡಿನ ಮೊಹಮ್ಮದ್ ಅಸರುದ್ದೀನ್‌ರ ಅಜೇಯ 177 ರನ್‌ಗಳೊಂದಿಗೆ 457 ರನ್ ಗಳಿಸಿದ ಕೇರಳ, ಎದುರಾಳಿ ತಂಡ ಗುಜರಾತ್‌ನ್ನು ೪೫೫ಕ್ಕೆ ಅಲೌಟ್ ಮಾಡಿ ಕೇವಲ 2 ರನ್‌ಗಳಿಂದ ಗೆದ್ದು ಫೈನಲ್‌ಗೇರಿತು.
ಇನ್ನೊಂದೆಡೆ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪ್ಯನ್ ಮುಂಬೈ ತಂಡವನ್ನು ವಿದರ್ಭ ತಂಡ 80 ರನ್‌ಗಳ ಅಂತರ ದಲ್ಲಿ ಪರಾಭವಗೊಳಿಸಿ ಫೈನಲ್‌ಗೇರಿದೆ. ಈ ಮೂಲಕ ಫೈನಲ್‌ನಲ್ಲಿ ಆ ತಂಡ ಕೇರಳವನ್ನು ಎದುರಿಸಲಿದೆ.