ರಸ್ತೆಯಲ್ಲಿ ವೇದಿಕೆ ನಿರ್ಮಿಸಿ ಸಮ್ಮೇಳನ: ಸಿಪಿಎಂ ರಾಜ್ಯ ಕಾರ್ಯದರ್ಶಿ ಸೇರಿ 16 ಮಂದಿಯ ಯಾದಿ ಹೈಕೋರ್ಟ್‌ಗೆ ಸಲ್ಲಿಸಿದ ಪೊಲೀಸರು
ತಿರುವನಂತಪುರ: ಸಿಪಿಎಂನ ತಿರುವನಂತಪುರ ಪಾಳಯಂ ಏರಿಯಾ ಸಮ್ಮೇಳನಕ್ಕಾಗಿ ರಸ್ತೆಯಲ್ಲಿ ವೇದಿಕೆ ನಿರ್ಮಿಸಿದ ಘಟನೆಗೆ ಸಂಬಂಧಿಸಿ ಅದರಲ್ಲಿ ಭಾಗವಹಿಸಿದ್ದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ೧೬ ಮಂದಿಯ ಯಾದಿಯನ್ನು ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಒಂದು ವೇಳೆ ಹೈಕೋರ್ಟ್ ಆದೇಶ ನೀಡದಿದ್ದಲ್ಲಿ ಈ 16 ಮಂದಿಯ ವಿರುದ್ಧ ಪೊಲೀಸರಿಗೆ ಪ್ರಕರಣ ದಾಖಲಿಸಬೇಕಾಗಿ ಬರಲಿದೆ.
ರಸ್ತೆಯಲ್ಲಿ ವೇದಿಕೆ ನಿರ್ಮಿಸಿದುದಕ್ಕೆ ಸಂಬಂಧಿಸಿ ೫೦೦ರಷ್ಟು ಮಂದಿ ವಿರುದ್ಧ ಪೊಲೀಸರು ಈಗಾಗಲೇ ಕೇಸು ದಾಖಲಿಸಿಕೊಂಡಿದ್ದಾರೆ. ಸಮ್ಮೇಳನದ ವೀಡಿಯೋ ದೃಶ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರ ಆಧಾರದಲ್ಲಿ 500 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರೂ, ಅದರಲ್ಲಿ ಭಾಗವಹಿಸಿದ್ದ ಪಕ್ಷದ ರಾಜ್ಯ ನೇತಾರರನ್ನು ಅದರಿಂದ ಹೊರತುಪಡಿಸಿದ್ದರು. ಅದನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅದರಿಂದಾಗಿ ಆ ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಂ.ವಿ. ಗೋವಿಂದನ್ ಸೇರಿದಂತೆ ೧೬ ಮಂದಿಯ ಯಾದಿಯನ್ನು ಪೊಲೀಸರು ಈಗ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.