ರಸ್ತೆ ಅಪಘಾತಗಳಲ್ಲಿ ಹೆಚ್ಚಳ : ಪೊಲೀಸರಿಂದ ತೀವ್ರ ತಪಾಸಣೆ

ಕಾಸರಗೋಡು: ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಮೋಟಾರು ವಾಹನ ಇಲಾಖೆ ಹಾಗೂ ಪೊಲೀಸರು ಜಂಟಿ ಯಾಗಿ ವಾಹನ ತಪಾಸಣೆಗೆ ಜಿಲ್ಲೆಯಲ್ಲಿ ಚಾಲನೆ ನೀಡಿದ್ದಾರೆ. ಜಂಟಿ ವಾಹನ ತಪಾಸಣೆ ತಿಳುವಳಿಕೆ ಯೋಜನೆಗೆ ಜಿಲ್ಲಾ ಪೊಲೀಸ್ ಅಧಿಕಾರಿ ಡಿ. ಶಿಲ್ಪಾ ನೇತೃತ್ವ ನೀಡಿದರು.

ರಾಜ್ಯವ್ಯಾಪಕವಾಗಿ ನಡೆಸುವ ತಪಾಸಣೆಯಂಗವಾಗಿ ಜಿಲ್ಲೆಯಲ್ಲೂ  ಹೆದ್ದಾರಿ ಬದಿಯಲ್ಲಿ ತಪಾಸಣೆ ನಡೆಸಲಾಗಿದೆ.

ಅಪಘಾತ ವಲಯ ಗಳನ್ನು ಕೇಂದ್ರೀಕರಿಸಿ ಪ್ರಾರಂಭದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಅಪರಿಮಿತ ವೇಗ, ಮದ್ಯ ಸೇವಿಸಿ ಚಾಲನೆ, ಅಜಾಗ್ರತೆಯಿಂದ ವಾಹನ ಚಾಲನೆ, ಹೆಲ್ಮೆಟ್. ಸೀಟ್ ಬೆಲ್ಟ್ ಹಾಕದೆ ವಾಹನ ಓಡಿಸುವುದು ಮೊದ ಲಾದವುಗಳ ವಿರುದ್ಧ ಕ್ರಮ ಉಂಟಾಗಲಿದೆ. ಇದೇ ವೇಳೆ ಚಾಲಕರಲ್ಲಿ ತಿಳುವಳಿಕೆ ಮೂಡಿಸಲು ಕಾರ್ಯಕ್ರಮಗಳನ್ನು ನಡೆಸಲಾ ಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ನುಡಿದರು. ನಾಯಮ್ಮಾರ್‌ಮೂಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಭಾಗವಹಿ ಸಿದರು.

You cannot copy contents of this page